ರಾಹುಲ್ ಅಪಾಯಕಾರಿ ಆಟಗಾರ, ಆತನನ್ನು ಔಟ್ ಮಾಡಲಿರುವುದು ಒಂದೇ ವಿಧಾನ: ಮ್ಯಾಕ್ಸ್ ವೆಲ್
Team Udayavani, Nov 21, 2020, 8:05 AM IST
ಸಿಡ್ನಿ: ಕಳೆದ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನವಿತ್ತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯಂತ ಅಪಾಯಕಾರಿಯಾಗಬಲ್ಲರು ಎಂಬುದಾಗಿ ಕಾಂಗರೂ ನಾಡಿನ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ. ಇವರಿಬ್ಬರೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯರೆಂಬುದು ಉಲ್ಲೇಖನೀಯ.
“ರಾಹುಲ್ ಐಪಿಎಲ್ ಗನ್ ಆಗಿದ್ದರು. ಅವರ ಮನೋಸ್ಥೈರ್ಯ ಅಮೋಘ. ಒತ್ತಡ ಸಂದರ್ಭದಲ್ಲೂ ಬಹಳ ತಣ್ಣಗೆ ಉಳಿದು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರು. ಹೀಗಾಗಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಗೈರಾದರೂ ರಾಹುಲ್ ನಮ್ಮ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ’ ಎಂಬುದಾಗಿ ಮ್ಯಾಕ್ಸ್‌ವೆಲ್ ಎಚ್ಚರಿಸಿದರು.
“ಭಾರತ-ಆಸ್ಟ್ರೇಲಿಯ ಸರಣಿಯ ಟೀಮ್ ಮೀಟಿಂಗ್ ವೇಳೆ ರಾಹುಲ್ ಅವರನ್ನು ಹೇಗೆ ಔಟ್ ಮಾಡಬಹುದು ಎಂದು ನನ್ನಲ್ಲಿ ಕೇಳುವ ಸಂದರ್ಭ ಬರಬಹುದು. ಆಗ, ಅವರನ್ನು “ರಾಹುಲ್ ಅಪಾಯಕಾರಿ ಬ್ಯಾಟ್ಸ್ ಮನ್’ ರನೌಟ್ ಮಾಡಲು ಪ್ರಯತ್ನಿಸಿ ಎಂದು ಹೇಳಬೇಕಾಗುತ್ತದೋ ಏನೋ’ ಎಂದು ಮ್ಯಾಕ್ಸ್‌ವೆಲ್ ಭಾರತೀಯನ ಸಾಮರ್ಥ್ಯದ ಕುರಿತು ವಿವರಿಸಿದರು.
“ರಾಹುಲ್ ಐಪಿಎಲ್ ಫಾರ್ಮನ್ನು ಆಸ್ಟ್ರೇಲಿಯದಲ್ಲಿ ಮುಂದುವರಿಸುವ ಎಲ್ಲ ಸಾಧ್ಯತೆ ಇದೆ. ಸೀಮಿತ ಓವರ್‌ಗಳ ತಂಡಕ್ಕೆ ಉಪ ನಾಯಕರಾಗಿಯೂ ನೇಮಕಗೊಂಡಿದ್ದಾರೆ. ಇದು ರಾಹುಲ್ ಮೇಲೆ ಭಾರತದ ಆಯ್ಕೆ ಸಮಿತಿ ಇರಿಸಿದ ವಿಶ್ವಾಸಕ್ಕೆ ಸಾಕ್ಷಿ’ ಎಂದರು ಮ್ಯಾಕ್ಸ್‌ವೆಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಪೂರ್ಣ ಯಾರ್ಕರ್ ಎಸೆಯಲು ನೆಟ್ ಅಭ್ಯಾಸ ಸಹಕಾರಿ: ಅರ್ಷದೀಪ್ ಸಿಂಗ್
ಬುಮ್ರಾ ಸತತ 7 ಐಪಿಎಲ್ ಋತುಗಳಲ್ಲಿ 15 ಪ್ಲಸ್ ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್
ಐಪಿಎಲ್ ಓಪನಿಂಗ್ ಮ್ಯಾಚ್: 2020: ಚಾಂಪಿಯನ್ ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ವನಿತಾ ಟಿ20 ಚಾಲೆಂಜರ್ ಸರಣಿ: ಸೂಪರ್ ನೋವಾಗೆ ಸೂಪರ್ ಗೆಲುವು
MUST WATCH
ಹೊಸ ಸೇರ್ಪಡೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ