ಸ್ನೇಹಿತರಾಗಿರುವುದು ತಪ್ಪೇ: ಕೆ.ಎಲ್. ರಾಹುಲ್ ಪ್ರಶ್ನೆ
Team Udayavani, Jun 2, 2018, 6:00 AM IST
ಮುಂಬಯಿ: ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಭಾರತ ಕ್ರಿಕೆಟ್ ತಂಡದ ಖ್ಯಾತ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ತಳ್ಳಿ ಹಾಕಿದ್ದಾರೆ.
ಎರಡು ದಿನಗಳ ಹಿಂದೆ ನಿಧಿ ಜತೆ ಮುಂಬಯಿಯಲ್ಲಿ ಕೆ.ಎಲ್. ರಾಹುಲ್ ಡಿನ್ನರ್ ನಡೆಸಿದ್ದರು. ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ರಾಹುಲ್ ಆಂಗ್ಲ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
“ಒಬ್ಬ ಹುಡುಗ ಒಬ್ಬಳು ಹುಡುಗಿಯ ಜತೆ ಉತ್ತಮ ಸ್ನೇಹಿತನಾಗಿ ಇರಬಾರದೆ? ಇದರಲ್ಲಿ ತಪ್ಪೇನಿದೆ? ನಾವಿಬ್ಬರೂ ಬೆಂಗಳೂರಿನಲ್ಲಿದ್ದಾಗಲೇ ಒಳ್ಳೆಯ ಸ್ನೇಹಿತರಾಗಿದ್ದೆವು. ಕ್ರಿಕೆಟ್ ಆರಂಭದ ದಿನಗಳಿಂದಲೂ ಆಕೆ ನನಗೆ ಪರಿಚಯ. ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತೇನೆ ಎನ್ನುವುದು ನಿಜವಾಗಿದ್ದರೆ ಅದರಲ್ಲಿ ಮುಚ್ಚು ಮರೆಯಿಲ್ಲ. ಎಲ್ಲರ ಮುಂದೆ ಬಂದು ತಿಳಿಸುವೆ…’ ಎಂದು ರಾಹುಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ