ಪ್ರಾಣಿ ದಯಾ ಕಾರ್ಯಕರ್ತನಿಗೆ ಕೆ.ಎಲ್‌. ರಾಹುಲ್‌ 2 ಲ. ರೂ. ದೇಣಿಗೆ

Team Udayavani, Jan 25, 2020, 1:18 AM IST

ಮುಂಬಯಿ: ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಜನರ ಮನ ಗೆಲ್ಲುವಂಥ ಕೆಲಸ ಮಾಡಿದ್ದಾರೆ.

ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತ ಶ್ರವಣ್‌ ಕೃಷ್ಣನ್‌ ಎಂಬವರಿಗೆ 2 ಲಕ್ಷ ರೂ. ದೇಣಿಗೆ ಕೊಟ್ಟಿರುವುದು ಈಗ ಭಾರೀ ಸುದ್ದಿಯಾಗಿದೆ.

ಮುಂದಿನ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಾಗ ಸಿಗುವ ಹಣವನ್ನು ಕೊಡುವುದಾಗಿ ಶ್ರವಣ್‌ಗೆ ರಾಹುಲ್‌ ವಾಗ್ಧಾನ ಮಾಡಿದ್ದರು. ಅದರಂತೆ ಜ. 17ರಂದು ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಲಭಿಸಿದ ಒಂದು ಲಕ್ಷ ರೂ.ಗೆ ಇನ್ನೂ ಒಂದು ಲಕ್ಷ ರೂ. ಸೇರಿಸಿ ಶ್ರವಣ್‌ ಕೃಷ್ಣನ್‌ಗೆ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ