Udayavni Special

ಪಂಜಾಬ್‌ ಜಯಕ್ಕೆ ರಾಹುಲ್‌ ಆಸರೆ


Team Udayavani, May 7, 2018, 6:05 AM IST

PTI5_6_2018_000197B.jpg

ಇಂದೋರ್‌: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

ಮುಜೀಬ್‌ ಉರ್‌ ರೆಹಮಾನ್‌ ಅವರ ನಿಖರ ದಾಳಿಗೆ ತತ್ತರಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು 9 ವಿಕೆಟಿಗೆ 152 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಪಂಜಾಬ್‌ ತಂಡ ಕುಸಿತಕ್ಕೆ ಒಳಗಾದರೂ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಅವರ ಅಜೇಯ ಅರ್ಧಶತಕದಿಂದಾಗಿ 18.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 155 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ಪಂಜಾಬ್‌ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಒಂದು ಹಂತದಲ್ಲಿ 87 ರನ್ನಿಗೆ ನಾಲ್ಕು ವಿಕೆಟ್‌ ಕಳೆದು ಕೊಂಡು ಸಂಕಷ್ಟಕ್ಕೆ ಬಿದ್ದಿದ್ದ ಪಂಜಾಬ್‌ ತಂಡವನ್ನು ರಾಹುಲ್‌ ಆಧರಿಸಿದರು. ಅವರು ಮುರಿಯದ ಐದನೇ ವಿಕೆಟಿಗೆ ಮಾರ್ಕಸ್‌ ಸ್ಟಾಯಿನಿಸ್‌ ಜತೆಗೆ 68 ರನ್‌ ಪೇರಿಸಿ ತಂಡದ ಗೆಲುವು ಸಾರಿದರು. ಭರ್ಜರಿ ಆಟದ ಪ್ರದರ್ಶನ ನೀಡಿದ ರಾಹುಲ್‌ 54 ಎಸೆತ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 84 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಆರಂಭಕಾರ ಜಾಸ್‌ ಬಟ್ಲರ್‌ ಎಂದಿನಂತೆ ಬಿರುಸಿನ ಆಟಕ್ಕೆ ಮುಂದಾದರೂ ಇನ್ನೊಂದು ತುದಿಯಲ್ಲಿ ವಿಕೆಟ್‌ ಉರುಳುತ್ತಲೇ ಹೋದದ್ದು ರಾಜಸ್ಥಾನ್‌ಗೆ ಕಂಟಕವಾಗಿ ಪರಿಣಮಿಸಿತು. 13ನೇ ಓವರ್‌ ತನಕ ಕ್ರೀಸಿನಲ್ಲಿದ್ದ ಬಟ್ಲರ್‌ 39 ಎಸೆತ ಎದುರಿಸಿ 51 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಒಳಗೊಂಡಿತ್ತು.  ಬಟ್ಲರ್‌-ಸಂಜು ಸ್ಯಾಮ್ಸನ್‌ 3ನೇ ವಿಕೆಟಿಗೆ 49 ರನ್‌ ಪೇರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ರಾಜಸ್ಥಾನ್‌ ಕುಸಿತ ತೀವ್ರಗೊಂಡಿತು.ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಸತತ ಎಸೆತಗಳಲ್ಲಿ ಬಟ್ಲರ್‌, ಆರ್ಚರ್‌ ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿ ಣಮಿಸಿದರು. ಮುಜೀಬ್‌ ಸಾಧನೆ 27ಕ್ಕೆ 3 ವಿಕೆಟ್‌. 

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ಜಾಸ್‌ ಬಟ್ಲರ್‌    ಸಿ ರಾಹುಲ್‌ ಮುಜೀಬ್‌    51
ಡಿ’ಆರ್ಸಿ ಶಾರ್ಟ್‌    ಸಿ ಟೈ ಬಿ ಅಶ್ವಿ‌ನ್‌    2
ಅಜಿಂಕ್ಯ ರಹಾನೆ    ಸಿ ಗೇಲ್‌ ಬಿ ಪಟೇಲ್‌    5
ಸಂಜು ಸ್ಯಾಮ್ಸನ್‌    ಸಿ ನಾಯರ್‌ ಬಿ ಟೈ    28
ಬೆನ್‌ ಸ್ಟೋಕ್ಸ್‌    ಸಿ ತಿವಾರಿ ಬಿ ಮುಜೀಬ್‌    12
ರಾಹುಲ್‌ ತ್ರಿಪಾಠಿ    ಸಿ ಅಶ್ವಿ‌ನ್‌ ಬಿ ಟೈ    11
ಜೋಫ‌Å ಆರ್ಚರ್‌    ಬಿ ಮುಜೀಬ್‌    0
ಕೆ. ಗೌತಮ್‌    ಸಿ ಸ್ಟೊಯಿನಿಸ್‌ ಬಿ ರಜಪೂತ್‌    5
ಶ್ರೇಯಸ್‌ ಗೋಪಾಲ್‌    ರನೌಟ್‌    24
ಜೈದೇವ್‌ ಉನಾದ್ಕತ್‌    ಔಟಾಗದೆ    6
ಇತರ        8
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    152
ವಿಕೆಟ್‌ ಪತನ: 1-3, 2-35, 3-84, 4-100, 5-106, 6-106, 7-114, 8-129, 9-152.
ಬೌಲಿಂಗ್‌: ಆರ್‌. ಅಶ್ವಿ‌ನ್‌        4-0-30-1
ಅಂಕಿತ್‌ ರಜಪೂತ್‌        3-0-37-1
ಮುಜೀಬ್‌ ಉರ್‌ ರೆಹಮಾನ್‌    4-0-27-3
ಅಕ್ಷರ್‌ ಪಟೇಲ್‌        4-0-21-1
ಆ್ಯಂಡ್ರೂé ಟೈ        4-0-24-2
ಮಾರ್ಕಸ್‌ ಸ್ಟೊಯಿನಿಸ್‌        1-0-6-0
ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆಎಲ್‌ ರಾಹುಲ್‌    ಔಟಾಗದೆ    84
ಕ್ರಿಸ್‌ ಗೇಲ್‌    ಸಿ ಸ್ಯಾಮ್ಸನ್‌ ಬಿ ಆರ್ಚರ್‌    8
ಮಯಾಂಕ್‌ ಅಗರ್ವಾಲ್‌    ಸಿ ತ್ರಿಪಾಠಿ ಬಿ ಸ್ಟೋಕ್ಸ್‌    2
ಕರುಣ್‌ ನಾಯರ್‌    ಬಿ ಅನುರೀತ್‌ ಸಿಂಗ್‌    31
ಅಕ್ಷರ್‌ ಪಟೇಲ್‌    ಸಿ ಶಾರ್ಟ್‌ ಬಿ ಗೌತಮ್‌    4
ಮಾರ್ಕಸ್‌ ಸ್ಟಾಯಿನಿಸ್‌    ಔಟಾಗದೆ    23
ಇತರ:        3
ಒಟ್ಟು (18.4 ಓವರ್‌ಗಳಲ್ಲಿ 4 ವಿಕೆಟಿಗೆ)    155
ವಿಕೆಟ್‌ ಪತನ: 1-23, 2-29, 3-79, 4-87
ಬೌಲಿಂಗ್‌: ಕೃಷ್ಣಪ್ಪ ಗೌತಮ್‌        3-0-18-1
ಜೋಫ್ರಾ ಆರ್ಚರ್‌        3.4-0-43-1
ಬೆನ್‌ ಸ್ಟೋಕ್ಸ್‌        3-0-22-1
ಜೈದೇವ್‌ ಉನಾದ್ಕತ್‌        4-0-26-0
ಶ್ರೇಯಸ್‌ ಗೋಪಾಲ್‌        3-0-26-0
ಅನುರೀತ್‌ ಸಿಂಗ್‌        2-0-20-0
ಪಂದ್ಯಶ್ರೇಷ್ಠ: ಮುಜೀಬ್‌ ಉರ್‌ ರೆಹಮಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

Permit trading on Sunday also: Manohar Shetty

ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್‌ ಶೆಟ್ಟಿ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.