ಕನ್ನಡದಲ್ಲಿ ಕೊಹ್ಲಿ ಟ್ವೀಟ್: ಏನಂದ್ರು RCB Captain?

Team Udayavani, May 5, 2019, 8:50 PM IST

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ “ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಹೋರಾಟ ಶನಿವಾರ ಅಂತ್ಯವಾಗಿದ್ದು, ಅಂತಿಮ ಪಂದ್ಯದಲ್ಲಿ “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧ ಗೆಲುವು ಸಾಧಿಸೋ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಅಲ್ಲದೇ ಆರ್​ಸಿಬಿ ಸತತ ಸೋಲುಗಳಿಂದ ತೀವ್ರ ಮುಖಭಂಗ ಅನುಭವಿಸಿದರೂ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡವನ್ನು ಕೈಬಿಡದೇ ಮುಂದಿನ ಭಾರಿ ಕಪ್ ನಮ್ದೇ ಎಂದಿದ್ದಾರೆ.

ಇದೀಗ ಟೂರ್ನಿಯುದ್ದಕ್ಕೂ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಹೌದು! “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧದ ಗೆಲುವಿನ ಬಳಿಕ ಕೊಹ್ಲಿ ತಂಡವನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳು, ತಂಡದ ಸದಸ್ಯರು, ಗ್ರೌಂಡ್ ಸ್ಟಾಫ್, ಸಪೂರ್ಟ್ ಸ್ಟಾಫ್ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಮುಂದಿನ ವರ್ಷ ಬಲಿಷ್ಠವಾಗಿ ಮತ್ತೆ ಬರುತ್ತೇವೆ ಎಂದು ಇಂಗ್ಲೀಷ್‍‌ನಲ್ಲಿ ಟ್ವೀಟ್ ಮಾಡಿದ ಕೊಹ್ಲಿ, “ನೀವು ಇಲ್ಲಾಂದ್ರೆ, ನಾವು ಏನೂ ಅಲ್ಲಾ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಟ್ವೀಟ್‍ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ತರಹೇವಾರಿ ಕಮೆಂಟ್‍ಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಸೋಲು – ಗೆಲುವಿನಲ್ಲಿ ತಂಡದ ಜೊತೆಗಿದ್ದ ಅಭಿಮಾನಿಗಳ ಫೋಟೋವನ್ನು ಕೂಡ ಟ್ವೀಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ