ಕುಡಿವ ನೀರಿನಲ್ಲಿ ಕಾರು ತೊಳೆದ ಕೊಹ್ಲಿಗೆ 500 ರೂ. ದಂಡ!
Team Udayavani, Jun 8, 2019, 6:00 AM IST
ಗುರುಗ್ರಾಮ (ಹರ್ಯಾಣ): ನಿಯಮಗಳು ಎಲ್ಲರಿಗೂ ಒಂದೇ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗಾದರೂ ಅಷ್ಟೇ, ಜನಸಾಮಾನ್ಯನಿಗಾದರೂ ಅಷ್ಟೇ! ಇಂತಹ ಕಠಿನ ಸಂದೇಶ ಕೊಟ್ಟಿರುವುದು ಗುರುಗ್ರಾಮ ನಗರಪಾಲಿಕೆ.
ಕೆಲಸದವರೊಬ್ಬರು ಕೊಹ್ಲಿಯ ಕಾರನ್ನು ಕುಡಿಯುವ ನೀರಿನಿಂದ ತೊಳೆದರು ಎನ್ನುವುದು ನಗರಪಾಲಿಕೆ ಗಮನಕ್ಕೆ ಬಂದಿದೆ. ಕೂಡಲೇ 500 ರೂ. ದಂಡ ಹಾಕಿ, ಹಾಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಗುರುಗ್ರಾಮದ ಡಿಎಲ್ಎಫ್ ಫೇಸ್-1ನಲ್ಲಿ ಕೊಹ್ಲಿಯ ನಿವಾಸವಿದೆ ಎನ್ನಲಾಗಿದ್ದು, ಅಲ್ಲಿ ಅವರ 2 ಎಸ್ಯುವಿ ಸೇರಿದಂತೆ 7 ಕಾರುಗಳಿವೆ ಎಂಬ ಮಾಹಿತಿಯಿದೆ. ದಂಡ ಹಾಕಿದ ಕೂಡಲೇ ಅವರ ಸಿಬಂದಿ ಕೂಡಲೇ ಅದನ್ನು ಪಾವತಿ ಮಾಡಿದ್ದಾರೆಂದು ಹೇಳಲಾಗಿದೆ.
500 ರೂ. ದಂಡ ಕೊಹ್ಲಿಗೆ ತೀರಾ ಅಲ್ಪವಾದರೂ, ಇದರ ಮೂಲಕ ದೇಶವಾಸಿಗಳಿಗೆ ಕುಡಿಯುವ ನೀರಿನ ಬಗ್ಗೆ ಮಹತ್ವದ ಸಂದೇಶ ರವಾನೆಯಾಗಲಿದೆ ಎನ್ನುವುದು ನಗರಪಾಲಿಕೆಯ ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ