ಕೊಹ್ಲಿ ಜಾಹೀರಾತು ಮೌಲ್ಯ ಈಗ 1,200 ಕೋಟಿ ರೂ.

Team Udayavani, Jan 11, 2019, 1:15 AM IST

ಹೊಸದಿಲ್ಲಿ: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಜಾಹೀರಾತು ಮೌಲ್ಯ ಏರುತ್ತಲೇ ಇದೆ. ಇತ್ತೀಚೆಗೆ ಅವರ ಜಾಹೀರಾತು ಮೌಲ್ಯದಲ್ಲಿ ಶೇ. 18ರಷ್ಟು ಏರಿಕೆಯಾಗಿದೆ ಎಂದು “ಡಫ್ ಆ್ಯಂಡ್‌ ಫೆಲ್ಪ್’ ಸಂಸ್ಥೆ ಹೇಳಿದೆ. ಈಗ ಕೊಹ್ಲಿ ಭಾರತೀಯ ತಾರೆಯರ ಪೈಕಿ ಅತೀ ಮೌಲ್ಯಯುತ ವ್ಯಕ್ತಿ ಎಂದು ಕರೆಸಿಕೊಂಡಿದ್ದಾರೆ.

ಈಗ ಕೊಹ್ಲಿ ಜಾಹೀರಾತು ನೀಡುತ್ತಿರುವ ಒಟ್ಟು ಉತ್ಪನ್ನಗಳ ಸಂಖ್ಯೆ 24ಕ್ಕೇರಿದೆ. ಇದರ ಒಟ್ಟು ಮೌಲ್ಯ 1,200 ಕೋಟಿ ರೂ.ಗೂ ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ. ವರ್ಷದಿಂದ ವರ್ಷಕ್ಕೆ ಕೊಹ್ಲಿ ಜನಪ್ರಿಯತೆ ಹೆಚ್ಚುತ್ತ¤ಲೇ ಇದೆ. ಸಹಜವೆಂಬಂತೆ ಅವರ ಆದಾಯದಲ್ಲೂ ಏರಿಕೆಯಾಗುತ್ತಿದೆ. ಈ ಹಿಂದೆ ಭಾರತದಲ್ಲಿ ಸಚಿನ್‌ ತೆಂಡುಲ್ಕರ್‌ ಅತೀ ಹೆಚ್ಚು ಮಾರುಕಟ್ಟೆ ಹೊಂದಿದ್ದರು. ಧೋನಿ ಭಾರತದ ನಾಯಕರಾದ ಬಳಿಕ ಭಾರೀ ಜನಪ್ರಿಯತೆ ಗಳಿಸಿ, ಸಚಿನ್‌ ಅವರನ್ನು ಮೀರಿಸಿದರು. ಈಗ ಕೊಹ್ಲಿ ಧೋನಿಯನ್ನು ಮೀರಿಸಿ ಮುನ್ನುಗ್ಗಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ