ಕೊಹ್ಲಿ ಬೌಲಿಂಗ್ ಅಭ್ಯಾಸ
Team Udayavani, Dec 1, 2018, 6:10 AM IST
ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಪ್ರದರ್ಶನ ನೀಡಿದರು. ಕೊಹ್ಲಿ ಒಟ್ಟು ಎರಡು ಓವರ್ ಎಸೆದರು. ಆದರೆ ಅವರಿಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಕೇವಲ 6 ರನ್ ಬಿಟ್ಟುಕೊಟ್ಟು ಗಮನ ಸೆಳೆದರು. ಈ ಹಿಂದೆಯೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲಿಂಗ್ ನಡೆಸಿದ್ದರು. ಇದುವರೆಗೆ ಒಟ್ಟಾರೆ 163 ಎಸೆತ ಎಸೆದಿರುವ ಕೊಹ್ಲಿ ಒಂದೂ ವಿಕೆಟ್ ಪಡೆದಿಲ್ಲ.