ಖಿನ್ನತೆಗೆ ತುತ್ತಾಗಿರುವ ಮ್ಯಾಕ್ಸ್‌ವೆಲ್‌ಗೆ ಕೊಹ್ಲಿ ಬೆಂಬಲ

Team Udayavani, Nov 13, 2019, 11:42 PM IST

ಇಂದೋರ್‌: ಖನ್ನತೆಗೆ ತುತ್ತಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬೆಂಬಲ ಸೂಚಿಸಿದ್ದಾರೆ.

“ನಾನು 2014ರಲ್ಲಿ ವಿಫ‌ಲ ವಾಗಿದ್ದಾಗ ನನ್ನ ಪಾಲಿಗೆ ಕ್ರಿಕೆಟ್‌ ಮುಗಿಯಿತು ಎಂದುಕೊಂಡಿದ್ದೆ. ಇದೆಲ್ಲ ಮನಸ್ಸಿಗೆ ಸಂಬಂಧಿಸಿ ದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬ ರಿಗೂ ಮಾತನಾಡಲು ಅಧಿಕಾರ, ಅವಕಾಶವಿರಬೇಕು.

ಇನ್ನೊಬ್ಬನ ಮನಸ್ಸಿನಲ್ಲಿ ಯಾವ ರೀತಿಯ ಯೋಚನೆಗಳು ಸಂಘರ್ಷ ಮಾಡುತ್ತಿರುತ್ತವೆ ಎನ್ನುವುದನ್ನು ಊಹಿಸುವುದು ಕಷ್ಟ. ಮ್ಯಾಕ್ಸ್‌ ವೆಲ್‌ ಖನ್ನತೆಯಿಂದ ಕೂಡಲೇ ಹೊರ ಬರಲಿ ಎಂಬುದು ನನ್ನ ಹಾರೈಕೆ’ ಎಂದಿದ್ದಾರೆ ಕೊಹ್ಲಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ