ಅಮೆರಿಕ ಕ್ರಿಕೆಟ್ ಕೂಟದಲ್ಲಿ ಕೆಕೆಆರ್ ಹೂಡಿಕೆ
Team Udayavani, Dec 1, 2020, 10:45 PM IST
ಮುಂಬಯಿ: ಬಾಲಿವುಡ್‌ನ ಜನಪ್ರಿಯ ತಾರೆ ಶಾರುಖ್ ಖಾನ್ ತಮ್ಮ ಕೋಲ್ಕತಾ ನೈಟ್‌ರೈಡರ್ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸಲು ಹೊರಟಿದ್ದಾರೆ. ಐಪಿಎಲ್‌ನಲ್ಲಿ ಅವರದ್ದು ಜನಪ್ರಿಯ, ಯಶಸ್ವಿ ತಂಡ. ಹಾಗೆಯೇ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರು ಟ್ರಿನ್‌ಬ್ಯಾಗೊ ನೈಟ್‌ರೈಡರ್ ತಂಡ ವನ್ನೂ ಹೊಂದಿದ್ದಾರೆ. ಅಲ್ಲೂ ಭರ್ಜರಿ ಯಶಸ್ಸು ಪಡೆದಿದ್ದಾರೆ.
ಇದೀಗ ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಆರಂಭವಾಗಲಿದೆ. ಅಲ್ಲೂ ಹೂಡಿಕೆ ಮಾಡಲು ಶಾರುಖ್ ನಿರ್ಧರಿಸಿದ್ದಾರೆ. ಈ ಕೂಟವನ್ನು ಅಮೆರಿಕನ್ ಕ್ರಿಕೆಟ್ ಎಂಟರ್‌ಪ್ರೈಸಸ್ ಹಮ್ಮಿಕೊಂಡಿದೆ. ಅಮೆರಿಕದಲ್ಲಿ ಭಾರತೀಯ ಮೂಲದ ಲಕ್ಷಾಂತರ ಮಂದಿ ಇರುವುದರಿಂದ ಅಲ್ಲಿ ಕ್ರಿಕೆಟನ್ನು ಜನಪ್ರಿಯಗೊಳಿಸು ವುದು ಐಸಿಸಿ ಯೋಜನೆ. ಆದ್ದರಿಂದಲೇ ಕೋಟ್ಯಂತರ ರೂ. ವೆಚ್ಚದ ಮೇಜರ್ ಲೀಗ್ ಕ್ರಿಕೆಟ್‌ಗೆ ಸಿದ್ಧತೆ ನಡೆಸಲಾಗಿದೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ಅಭಿಮಾನಿಗಳನ್ನು ಸೆಳೆಯಬಹುದು. ಹಾಗೆಯೇ ಕೆಕೆಆರ್ ಮೌಲ್ಯವನ್ನು ಜಗತ್ತಿನಾ ದ್ಯಂತ ಹೆಚ್ಚಿಸಬಹುದು ಎಂಬ ಲೆಕ್ಕಾ ಚಾರ ಶಾರುಖ್ ಖಾನ್ ಅವರದ್ದು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444