Udayavni Special

ಕೆಪಿಎಲ್‌: ಶ್ರೇಯಸ್‌ ಗೋಪಾಲ್‌, ಸಮರ್ಥ್ ಮಾರಾಟವಾಗಲಿಲ್ಲವೇಕೆ?


Team Udayavani, Jul 23, 2018, 11:56 AM IST

kpl.jpg

ಬೆಂಗಳೂರು: ಹಿಂದಿನ ಆವೃತ್ತಿ ಕೆಪಿಎಲ್‌ಗ‌ಳಲ್ಲಿ ಸಕ್ರಿಯ ಪಾತ್ರವಹಿಸಿದ್ದ ಶ್ರೇಯಸ್‌ ಗೋಪಾಲ್‌ ಮತ್ತು ಆರ್‌. ಸಮರ್ಥ್ ಈ ಬಾರಿ ಮಾರಾಟವನ್ನೇ ಕಾಣಲಿಲ್ಲವೇಕೆ? ಶನಿವಾರದ ಹರಾಜಿನ ಬಳಿಕ ಈ ಪ್ರಶ್ನೆ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳನ್ನು ಬಹಳಷ್ಟು ಕಾಡತೊಡಗಿದೆ. ಭಾರತ ಎ ತಂಡದಲ್ಲಿ ರವಿಕುಮಾರ್‌ ಸಮರ್ಥ್ ಸ್ಥಾನ ಪಡೆದಿದ್ದಾರೆ. ಇನ್ನೊಂದು ಕಡೆ ಶ್ರೇಯಸ್‌ ಗೋಪಾಲ್‌ ಭಾರತ ಎ ತಂಡಕ್ಕೆ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಫ್ರಾಂಚೈಸಿಗಳು ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಿದವು ಎಂಬುದು ಸ್ಪಷ್ಟ.

ವಿಶೇಷವೆಂದರೆ, ಹಿಂದಿನ ಆವೃತ್ತಿಗಳಲ್ಲಿ ಗರಿಷ್ಠ ಮೊತ್ತ ಕಂಡಿದ್ದ ಮಾಯಾಂಕ್‌ ಅಗರ್ವಾಲ್‌, ಕೆ. ಗೌತಮ್‌ ಅವರನ್ನು ಈ ಬಾರಿ ಕೇಳುವವರೇ ಇರಲಿಲ್ಲ. ನಿಗದಿತ ಹರಾಜಿನ ವೇಳೆಯಲ್ಲಿ ಎರಡೆರಡು ಬಾರಿ ಹೆಸರು ಕರೆದರೂ ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಲಾಯಿತು. ಎರಡನೆ ಬಾರಿ ಕರೆದಾಗ ಹುಬ್ಬಳ್ಳಿ ಟೈಗರ್ಸ್‌ 25,000 ರೂ. ನೀಡಿ ಮಾಯಾಂಕ್‌ ಅವರನ್ನು ಖರೀದಿಸಿತು. 
ಗೌತಮ್‌ ಅವರನ್ನು ಹರಾಜು ಮುಗಿದ ಅನಂತರ 25,000 ರೂ. ನೀಡಿ ಮೈಸೂರು ವಾರಿಯರ್ಸ್‌ ಖರೀದಿಸಿತು. ಇದಕ್ಕೂ ಕಾರಣ, ಈ ಇಬ್ಬರು ಆಟಗಾರರು ಭಾರತ ಎ ತಂಡ ಅಥವಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿರುವುದು. ಒಂದು ವೇಳೆ ಈ ಇಬ್ಬರೂ ಆಯ್ಕೆಯಾದರೂ ತಮ್ಮ ಹಣ ನಷ್ಟವಾಗುವುದಿಲ್ಲ ಎಂಬ ಭರವಸೆಯೊಂದಿಗೆ ಕನಿಷ್ಠ ಬೆಲೆಗೆ ಫ್ರಾಂಚೈಸಿಗಳು ಖರೀದಿಸಿದವು.ಫ್ರಾಂಚೈಸಿಗಳು, ಕೆಪಿಎಲ್‌ನಲ್ಲಿ ಪೂರ್ಣಾವಧಿಯಲ್ಲಿ ಆಡುವ ಆಟಗಾರರಿಗೆ ಹೆಚ್ಚಿ ಆದ್ಯತೆ ನೀಡಿದ್ದು ಈ ಬಾರಿಯ ಹರಾಜಿನ ವಿಶೇಷ. ದೊಡ್ಡ ಮೊತ್ತಕ್ಕೆ ಖರೀದಿಸಿ, ಅವರು ಅರ್ಧದಲ್ಲೇ ಬಿಟ್ಟುಹೋಗುವುದರಿಂದ ನಷ್ಟ ಖಚಿತ ಎಂಬ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿತ್ತು!

ಬಿ ವಿಭಾಗದಲ್ಲಿ ದಾಖಲೆ 
ಅನುಭವ, ಸಾಮರ್ಥ್ಯ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಎರಡು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಿ ಹರಾಜು ನಡೆಸಲಾಗಿತ್ತು. ಅನುಭವ, ದಾಖಲೆ, ಫಾರ್ಮ್ನಲ್ಲಿ ಸ್ವಲ್ಪ ಹಿಂದಿದ್ದವರು ಪೂಲ್‌ ಬಿಯಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ 20 ಸಾವಿರ ರೂ. ಮೂಲ ಬೆಲೆ ಇರುತ್ತದೆ. ಈ ಗುಂಪಿನಲ್ಲಿ ಸ್ಥಾನ ಪಡೆದರೂ ಮೋಹನ್‌ರಾಮ್‌ ನಿದೀಶ್‌ ಮತ್ತು ಆರ್‌. ಜೊನಾಥನ್‌ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದಾರೆ. ನಿದೀಶ್‌ 5.85 ಲಕ್ಷ ರೂ. ಪಡೆದರೆ, ಜೊನಾಥನ್‌ 5.45 ಲಕ್ಷ ರೂ.ಗೆ ಬಿಕರಿಯಾದರೂ ಬಿ ವಿಭಾಗದ ಆಟಗಾರರ ಪೈಕಿ ಇದು ದಾಖಲೆಯಾಗಿದೆ. ಶನಿವಾರದ ಹರಾಜಿನಲ್ಲಿ ಅಭಿಮನ್ಯು ಮಿಥುನ್‌ ಕೆಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ (8.30 ಲಕ್ಷ ರೂ.) ಮಾರಾಟವಾಗಿ ದಾಖಲೆ ನಿರ್ಮಿಸಿದ್ದರು.

ಟಾಪ್ ನ್ಯೂಸ್

GJGHJKHGF

ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್‌ ಇಲ್ವಂತೆ!

Untitled-1

ಇ-ಸಂಜೀವಿನಿ: ಕರ್ನಾಟಕ ದ್ವಿತೀಯ

Untitled-1

ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Untitled-1

ಒಂದೇ ಸೂರಿನಡಿ ಜುವೆಲರಿ ಸೇವೆ: ರಾಜ್ಯದಲ್ಲಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ

ನ್ಯಾಯಬೆಲೆ ಅಂಗಡಿ ಇನ್ನು ಸಾಮಾನ್ಯ ಸೇವಾ ಕೇಂದ್ರ?

ನ್ಯಾಯಬೆಲೆ ಅಂಗಡಿ ಇನ್ನು ಸಾಮಾನ್ಯ ಸೇವಾ ಕೇಂದ್ರ?

ಕ್ವಾರಂಟೈನ್‌ ವಿವಾದ ಬಗೆಹರಿಸದಿದ್ದರೆ ಕಠಿನ ಕ್ರಮ

ಕ್ವಾರಂಟೈನ್‌ ವಿವಾದ ಬಗೆಹರಿಸದಿದ್ದರೆ ಕಠಿನ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಯುಎಇಯಲ್ಲಿ ಬದಲಾದೀತೇ ಹೈದರಾಬಾದ್‌ ಅದೃಷ್ಟ?

Untitled-1

ತ್ಯಾಗಿ ಮ್ಯಾಜಿಕ್‌; ರಾಜಸ್ಥಾನ್‌ಗೆ 2 ರನ್‌ ಜಯ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

Untitled-1

ಏಕದಿನ ಬ್ಯಾಟಿಂಗ್‌ ಶ್ರೇಯಾಂಕ: ಮಿಥಾಲಿ ವಿಶ್ವ ನಂ.1

ಐಪಿಎಲ್ ನಲ್ಲಿಂದು ರಾಹುಲ್-ಸ್ಯಾಮ್ಸನ್ ಪೈಪೋಟಿ: ಸಂಭಾವ್ಯ ಆಟಗಾರರ ಪಟ್ಟಿ

ಐಪಿಎಲ್ ನಲ್ಲಿಂದು ರಾಹುಲ್-ಸ್ಯಾಮ್ಸನ್ ಪೈಪೋಟಿ: ಸಂಭಾವ್ಯ ಆಟಗಾರರ ಪಟ್ಟಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

GJGHJKHGF

ಕನ್ನಡ ಸಿನಿಮಾ ಮಾಡಲು ರಶ್ಮಿಕಾಗೆ ಟೈಮ್‌ ಇಲ್ವಂತೆ!

Untitled-1

ಇ-ಸಂಜೀವಿನಿ: ಕರ್ನಾಟಕ ದ್ವಿತೀಯ

Untitled-1

ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Untitled-1

ಒಂದೇ ಸೂರಿನಡಿ ಜುವೆಲರಿ ಸೇವೆ: ರಾಜ್ಯದಲ್ಲಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.