ಕೆಪಿಎಲ್ ಬೆಟಿಂಗ್ ಪ್ರಕರಣ: 16 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಸಿಸಿಬಿ
Team Udayavani, Feb 8, 2020, 9:04 AM IST
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಲ್) ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳ ತನಿಖೆ ಕೈಗೊಂಡಿದ್ದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಅಧಿಕಾರಿಗಳು ಕೆಪಿಎಲ್ನ ಎರಡು ತಂಡದ ಮಾಲೀಕರು, ಆಟಗಾರರು ಸೇರಿ ಒಟ್ಟು 16 ಮಂದಿ ವಿರುದ್ಧ ಶುಕ್ರವಾರ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರ ಅಶ್ವಾಕ್ ಅಲಿ, ಬಳ್ಳಾರಿ ಟಸ್ಕರ್ಸ್ ಮಾಲೀಕ ಅರವಿಂದ ವೆಂಕಟೇಶ ರೆಡ್ಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ವಹಣಾ ಸಮಿತಿಯ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ನಿಶಾಂತ್ ಸಿಂಗ್ ಶೇಖಾವತ್, ಬೆಂಗಳೂರು ಬ್ಲಾಸ್ಟರ್ ಬೌಲಿಂಗ್ ಕೋಚ್ ವಿನೂ ಪ್ರಸಾದ್, ಬ್ಯಾಟ್ಸ್ಮ್ಯಾನ್ ಎಂ.ವಿಶ್ವನಾಥನ್, ಬುಕ್ಕಿಗಳಾದ ಮಾವಿ ಹಾಗೂ ಡ್ರಮರ್ ಭವೇಶ್ ಭಫಾ°,
ಬುಕ್ಕಿಗಳಾದ ಸಯ್ಯಮ್, ಜಟಿನ್, ಹರೀಶ್, ಮೊಂಟಿ, ವೆಂಕಿ, ಕಿರಣ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಆರೋಪಿಗಳ ವಿರುದ್ಧ ಕಬ್ಬನ್ಪಾರ್ಕ್, ಭಾರತೀನಗರ ಮತ್ತು ಜೆ.ಪಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್