Udayavni Special

ದ್ವಿತೀಯ ಸುತ್ತಿನಲ್ಲಿ ಎಡವಿದ ಸೆರೆನಾ

Team Udayavani, Aug 16, 2018, 6:00 AM IST

11.jpg

ಸಿನ್ಸಿನಾಟಿ (ಒಹಿಯೊ, ಯುಎಸ್‌ಎ): ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಲ್ಲಿ ತವರಿನ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ. ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ 3 ಸೆಟ್‌ಗಳ ಕಾದಾಟದ ಬಳಿಕ ಸೆರೆನಾ ಅವರನ್ನು 6-3, 2-6, 6-3ರಿಂದ ಮಣಿಸಿದರು.

“ಸೆರೆನಾ ವಿರುದ್ಧ ಆಡುವುದೇ ಒಂದು ಹಿತಾನುಭವ. ಈ ಗೆಲುವು ಸಂತಸ ತಂದಿದೆ’ ಎಂದು ಕ್ವಿಟೋವಾ ಪ್ರತಿಕ್ರಿಯಿಸಿದ್ದಾರೆ. ಸರಿಯಾಗಿ 2 ಗಂಟೆ ಗಳ ಕಾಲ ಇವರ ಸ್ಪರ್ಧೆ ಸಾಗಿತು. ಸೆರೆನಾ ವಿಲಿಯಮ್ಸ್‌ ಜತೆಯಲ್ಲೇ ತವರಿನ ಆಟಗಾರ್ತಿಯರಾದ ಕೊಕೊ ವಾಂಡೆವೇಗ್‌, ವರ್ವರಾ ಲೆಪೆcಂಕೊ, ಅಲ್ಲೀ ಕಿಕ್‌ ಅವರೆಲ್ಲ ಸೋತು ಕೂಟದಿಂದ ಹೊರಬಿದ್ದಿದ್ದಾರೆ.

6ನೇ ಶ್ರೇಯಾಂಕದ ಕ್ಯಾರೋಲಿನಾ ಗಾರ್ಸಿಯಾ 2013ರ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ ಅವರನ್ನು 6-4, 7-5ರಿಂದ ಮಣಿಸಿದರು. 2016ರ ವಿಜೇತೆ, ಜೆಕ್‌ ಗಣ ರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 6-3, 6-3ರಿಂದ ಪೋಲೆಂಡಿನ ಅಗ್ನಿಸ್ಕಾ ರಾದ್ವಂಸ್ಕಾ ಅವರಿಗೆ ಸೋಲುಣಿಸಿದರು. ಇದು ರಾದ್ವಂಸ್ಕಾ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪ್ಲಿಸ್ಕೋವಾ ಸಾಧಿಸಿದ ಮೊದಲ ಗೆಲುವು. “ಈ ಪಂದ್ಯ ಸಂಪೂರ್ಣ ವಾಗಿ ನನ್ನ ಹಿಡಿತದಲ್ಲಿತ್ತು’ ಎಂಬು ದಾಗಿ ಪ್ಲಿಸ್ಕೋವಾ ಹೇಳಿದರು.

ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್‌ 12ನೇ ಶ್ರೇಯಾಂಕದ ರಶ್ಯನ್‌ ಎದುರಾಳಿ ದರಿಯಾ ಕಸತ್ಕಿನಾ ವಿರುದ್ಧ 4-6, 6-4, 6-3 ಅಂತರದಿಂದ ಗೆದ್ದು ಬಂದರು. ಬೆಲ್ಜಿಯಂನ ಎಲಿಸ್‌ ಮೆರ್ಟೆನ್ಸ್‌, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಕ್ರಮವಾಗಿ ಮ್ಯಾಗ್ಡಲೆನಾ ರಿಬರಿಕೋವಾ ಹಾಗೂ ಮಾರ್ಕೆಟಾ ವೊಂಡೌಸೋವಾ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದರು.

ಗೊಜೋವಿಕ್‌ ವಿರುದ್ಧ  ಗೆದ್ದ ಫೆಡರರ್‌ 
ಸಿನ್ಸಿನಾಟಿ ಕೂಟದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ರೋಜರ್‌ ಫೆಡರರ್‌ ಗೆಲುವಿನ ಆರಂಭ  ಕಂಡು ಕೊಂಡಿದ್ದಾರೆ. 7 ಸಲ ಸಿನ್ಸಿನಾಟಿ ಪ್ರಶಸ್ತಿ ಎತ್ತಿರುವ ಫೆಡರರ್‌, ಜರ್ಮನಿಯ ಪೀಟರ್‌ ಗೊಜೋವಿಕ್‌ ವಿರುದ್ಧ 6-4, 6-4 ಅಂತರದಿಂದ ಗೆದ್ದು ಬಂದರು. ಫೆಡರರ್‌ ಅವರಿನ್ನು ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್‌ ವಿರುದ್ಧ ಸೆಣಸಲಿದ್ದು, ಗೆದ್ದರೆ ಕ್ವಾರ್ಟರ್‌ ಫೈನಲ್‌ ತಲುಪಲಿದ್ದಾರೆ. ಮೇಯರ್‌ 7-6 (9-7), 6-4 ಅಂತರದಿಂದ ಫ್ರಾನ್ಸ್‌ನ ಲುಕಾಸ್‌ ಪೌಲಿಗೆ ಸೋಲುಣಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

0

ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

0

ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

ಹಾರ್ದಿಕ್‌ ಪಾಂಡ್ಯಾ ಮತ್ತೆ ಬೌಲಿಂಗ್‌ ಮಾಡೋದು ಯಾವಾಗ? ಇಲ್ಲಿದೆ ಜಹೀರ್‌ ಖಾನ್‌ ಉತ್ತರ

85 ರನ್ ಗಳಿಸಿದರೆ ಸಾಕು ವಿರಾಟ್ ಕೊಹ್ಲಿಗೆ ಈ ಹೊಸ ಮೈಲಿಗಲ್ಲು ಸಾಧಿಸಲು!

ವಿರಾಟ್ ಕೊಹ್ಲಿ 85 ರನ್ ಗಳಿಸಿದರೆ ಸಾಕು ಈ ಹೊಸ ಮೈಲಿಗಲ್ಲು ಸಾಧಿಸಲು!

ಪೂರನ್ ಫೀಲ್ಡಿಂಗ್

ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Isiri-tdy-3

ವಿಮೆ ಇದ್ದವನೇ ಶೂರ!

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.