ಮೆಕ್ಸಿಕೊ ಓಪನ್‌ ನಡಾಲ್‌ಗೆ ಅಘಾತವಿಕ್ಕಿದ ಕಿರ್ಗಿಯೋಸ್‌

Team Udayavani, Mar 1, 2019, 12:30 AM IST

ಅಕಾಪುಲ್ಕೊ: ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ಗೆ ಅಘಾತವಿಕ್ಕುವ ಮೂಲಕ “ಮೆಕ್ಸಿಕೊ ಓಪನ್‌’ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಕಿರ್ಗಿಯೋಸ್‌ ಭಾರೀ ಹೋರಾಟದ ಬಳಿಕ  3-6, 7-6 (7-2), 7-6 (8-6) ಸೆಟ್‌ಗಳ ಅಂತರದಿಂದ ನಡಾಲ್‌ಗೆ ಸೋಲುಣಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಕಿರ್ಗಿಯೋಸ್‌ ಸ್ವಿಜರ್‌ಲ್ಯಾಂಡಿನ ಸ್ಟಾನ್‌ ವಾವ್ರಿಂಕ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ವಾವ್ರಿಂಕ ಅಮೆರಿಕದ ಸ್ಟೀವ್‌ ಜಾನ್ಸನ್‌ ವಿರುದ್ಧ 7-6 (7-5), 6-4 ಅಂತರದ ಜಯ ಸಾಧಿಸಿದರು.

ಸ್ಲೋನ್‌ ಸ್ಟೀಫ‌ನ್ಸ್‌ ಗೆ ಸೋಲು
ವನಿತಾ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಸ್ಲೋನ್‌ ಸ್ಟೀಫ‌ನ್ಸ್‌ ಬ್ರಝಿಲ್‌ನ ಅರ್ಹತಾ ಆಟಗಾರ್ತಿ ಬೀಟ್ರಿಜ್‌ ಹದ್ದದ್‌ ಮಿಯಾ ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಪರಾಭವಗೊಂಡರು. ಬೀಟ್ರಿಜ್‌ಗೆ ಇದು ಟಾಪ್‌-10 ಆಟಗಾರ್ತಿಯರ ವಿರುದ್ಧ 7 ಪಂದ್ಯಗಳಲ್ಲಿ ಒಲಿದ ಮೊದಲ ಜಯವಾಗಿದೆ. 22 ವರ್ಷದ ಬ್ರಿàಟಿಜ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನದ ವಾಂಗ್‌ ಯೂಫಾನ್‌ ಅವರನ್ನು ಎದುರಿಸಲಿದ್ದಾರೆ.

ಮತ್ತೂಂದು ಪಂದ್ಯದಲ್ಲಿ 2 ಬಾರಿಯ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ ಜರ್ಮನಿಯ ತಜಾನಾ ಮಾರಿಯಾ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಸೋಲಿಸಿದರು. ಅವರ ಮುಂದಿನ ಎದುರಾಳಿ ಅಮೆರಿಕದ ಸೋಫಿಯಾ ಕೆನ್ನಿನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ