ಮಾಲಿಂಗ ನೆಟ್ ಬೌಲಿಂಗಿಗೆ ಸೀಮಿತ?
Team Udayavani, Dec 31, 2017, 6:30 AM IST
ಕೊಲಂಬೊ: ಶ್ರೀಲಂಕಾದ ಅನುಭವಿ ವೇಗದ ಬೌಲರ್ ಲಸಿತ ಮಾಲಿಂಗ ಲಂಕಾ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಬಳಿಕವಷ್ಟೇ ಅವರಿಗೊಂದು ಶಾಕಿಂಗ್ ಸುದ್ದಿ ಕಾದಿತ್ತು. ಅದೆನೆಂದರೆ, ಬಾಂಗ್ಲಾದೇಶ ವಿರುದ್ಧದ ಸರಣಿಗೆ ತಂಡದಲ್ಲಿ ಅವರಿಗೆ ಸ್ಥಾನವಿಲ್ಲ ಎನ್ನುವುದು!
ಹೌದು, ತನ್ನನ್ನು ಕೇವಲ ನೆಟ್ಬೌಲರ್ ಆಗಿ ಲಂಕಾ ಮಂಡಳಿ ಉಪಯೋಗಿಸಿಕೊಂಡಿತು ಎಂದು ಮಾಲಿಂಗ ದೂರಿದ್ದಾರೆ. ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿ 23 ಮಂದಿ ತಂಡದೊಳಗೆ ನನಗೆ ಸ್ಥಾನ ನೀಡಿಲ್ಲವೇಕೆ, ನಾನು ಕೇವಲ ನೆಟ್ ಬೌಲಿಂಗ್ ಸಾಮರ್ಥ್ಯ ಇರುವವನು ಎಂದು ಆಯ್ಕೆ ಮಂಡಳಿ ನಿರ್ಧರಿಸಿದೆಯೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಮಾಲಿಂಗ ಫಾರ್ಮ್ನಲ್ಲಿಲ್ಲ. ಈ ವರ್ಷ ಆರಂಭದಲ್ಲಿ ಗಾಯಗೊಂಡು ತಂಡದಿಂದ ಹೊರಗಿದ್ದ ಅವರು ಬಳಿಕ ವಾಪಸ್ ಆಗಿ 6 ಟಿ20 ಪಂದ್ಯ ಆಡಿ 12 ವಿಕೆಟ್ ಪಡೆದಿದ್ದರು. 13 ಏಕದಿನ ಕ್ರಿಕೆಟ್ ಪಂದ್ಯಗಳಿಂದ 10 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.