ಮುಂಬೈ ಕ್ಯಾಂಪ್ಗೆ ಮರಳಿದ ಲಸಿತ್ ಮಾಲಿಂಗ
Team Udayavani, Apr 11, 2019, 6:30 AM IST
ಮುಂಬಯಿ: ಶ್ರೀಲಂಕಾ ದೇಶಿ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅರ್ಧದಿಂದಲೇ ಐಪಿಎಲ್ ಕೂಟವನ್ನು ತೊರೆದಿದ್ದ ಮುಂಬೈ ಇಂಡಿಯನ್ಸ್ನ ವೇಗದ ಬೌಲರ್ ಲಸಿತ್ ಮಾಲಿಂಗ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ 3 ಪಂದ್ಯ ಆಡಿರುವ ಮಾಲಿಂಗ 8 ವಿಕೆಟ್ ಪಡೆದಿದ್ದರು. ಈ ವೇಳೆ ಲಂಕಾ ಕ್ರಿಕೆಟ್ ಮಂಡಳಿ ದೇಶಿ ಕ್ರಿಕೆಟ್ ಕೂಟದಲ್ಲಿ ಭಾಗವಹಿಸಲು ಮಾಲಿಂಗ ತವರಿಗೆ ಮರಳುವಂತೆ ಸೂಚಿಸಿತ್ತು. ಇದಕ್ಕೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಒಂದು ಹಂತದಲ್ಲಿ ಬಿಸಿಸಿಐಗೆ ಬಗ್ಗಿದ್ದರೂ ಮುಂದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಮಾಲಿಂಗ ಲಂಕಾ ದೇಶಿ ಕ್ರಿಕೆಟ್ ಕೂಟದಲ್ಲಿ ಆಡುವುದು ಅನಿವಾರ್ಯ ಎನ್ನುವುದನ್ನು ಬಿಸಿಸಿಐಗೆ ಮನವರಿಕೆ ಮಾಡಿಕೊಟ್ಟಿತ್ತು. ಹೀಗಾಗಿ ಲಂಕಾ ತಂಡದ ಪರ ಪಂದ್ಯವನ್ನು ಆಡಿದ ಮಾಲಿಂಗ ಅಲ್ಲೂ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರು. ಇದೀಗ ಮತ್ತೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.