ಶ್ರೇಯಾಂಕ: ಅಗ್ರ 50ರೊಳಗೆ ಪೇಸ್
Team Udayavani, Mar 6, 2018, 7:00 AM IST
ಹೊಸದಿಲ್ಲಿ: ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಪುರುಷರ ಡಬಲ್ಸ್ ಟೆನಿಸ್ ಶ್ರೇಯಾಂಕ ದಲ್ಲಿ ಮತ್ತೆ ಅಗ್ರ 50ರೊಳಗೆ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ ಮುಗಿದ ಎಟಿಪಿ ದುಬಾೖ ಟೂರ್ನಿಯಲ್ಲಿ ಪೇಸ್ ಜೋಡಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಇದರಿಂದಾಗಿ ಪೇಸ್ ಒಟ್ಟು 6 ಸ್ಥಾನ ಜಿಗಿತ ಕಂಡು, 46ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಪುರುಷರ ಡಬಲ್ಸ್ನಲ್ಲಿ ಭಾರತದ ದಿವಿಜ್ ಶರಣ್ 44ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹನ್ ಬೋಪಣ್ಣ 20ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಪುರವ್ ರಾಜ 62ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಷ್ಣುವರ್ಧನ್ 99ನೇ ಶ್ರೇಯಾಂಕ ಪಡೆದಿದ್ದಾರೆ.