ನಾಡಾ-ಬಿಸಿಸಿಐ ಚಕಮಕಿಗೆ ಲಘು ವಿರಾಮ


Team Udayavani, Mar 19, 2019, 12:30 AM IST

bcci-nada.jpg

ಮುಂಬಯಿ: ಬಿಸಿಸಿಐ ಆಡಳಿತಾಧಿಕಾರಿಗಳು ಹಾಗೂ ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ನಡುವೆ ನಡೆದ ಸುದೀರ್ಘ‌ ಚರ್ಚೆಯ ಅನಂತರ ಬಿಸಿಸಿಐ ಬಹುಮುಖ್ಯ ನಿರ್ಧಾರಕ್ಕೆ ಬಂದಿದೆ. ದೀರ್ಘ‌ ಕಾಲದಿಂದ ವಾಡಾದಿಂದ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಉದ್ದೀಪನ ಪರೀಕ್ಷೆಗೊಳಪಡಲು ನಿರಾಕರಿಸುತ್ತಲೇ ಬಂದಿದ್ದ ಅದು, ಇದೀಗ ತನ್ನ ನಿರ್ಧಾರವನ್ನು ತುಸು ಸಡಿಲಿಸಿ ಪರೀಕ್ಷೆಗೊಳಪಡಲು ಒಪ್ಪಿದೆ. ಆದರೆ ಇದು 6 ತಿಂಗಳ ಅವಧಿಗೆ ಮಾತ್ರ. ಈ ಅವಧಿಯಲ್ಲಿ ಪರೀಕ್ಷಾ ಕ್ರಮ ಬಿಸಿಸಿಐಗೆ ತೃಪ್ತಿ ತರದಿದ್ದರೆ ಒಪ್ಪಂದ ರದ್ದು ಮಾಡಿಕೊಳ್ಳುತ್ತೇನೆಂದು ಹೇಳಿದೆ.

ವಾಡಾದ ಭಾರತೀಯ ಅಂಗಸಂಸ್ಥೆ ನಾಡಾದಿಂದ ಬಿಸಿಸಿಐ ವ್ಯಾಪ್ತಿಯಲ್ಲಿ ಬರುವ ಕ್ರಿಕೆಟಿಗರು ಪರೀಕ್ಷೆಗೊಳಪಡಲಿದ್ದಾರೆ. ನಿಯಮದ ಪ್ರಕಾರ, ಒಂದು ಕ್ರೀಡಾಸಂಸ್ಥೆಯ ಶೇ. 10ರಷ್ಟು ಕ್ರೀಡಾಪಟುಗಳು ಪರೀಕ್ಷೆಗೊಳಪಟ್ಟರೆ ಮಾತ್ರ ಆ ಸಂಸ್ಥೆಗೆ ವಾಡಾ ಮಾನ್ಯತೆ ಸಿಗಲಿದೆ. ಆ ಪ್ರಕಾರ 6 ತಿಂಗಳ ಕಾಲ ಬಿಸಿಸಿಐ ನಿರ್ಧರಿಸಿದ ಕ್ರಿಕೆಟಿಗರ ಮೂತ್ರ ಸಂಗ್ರಹವನ್ನು ನಾಡಾಗೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ. ಆದರೆ ಈ ಬಗ್ಗೆ ನಾಡಾಗೆ ಇನ್ನೂ ಯಾವುದೇ ಮಾಹಿತಿ ತಲುಪಿಲ್ಲ ಅಥವಾ ಅಧಿಕೃತ ಒಪ್ಪಂದವೂ ಆಗಿಲ್ಲ.

ಇದುವರೆಗೆ ನಿರಾಕರಿಸಿದ್ದೇಕೆ?
ಬಿಸಿಸಿಐ ಇದುವರೆಗೆ ನಾಡಾದಿಂದ ಪರೀಕ್ಷೆಗೊಳಪಡಲು ಸತತವಾಗಿ ನಿರಾಕರಿಸಿತ್ತು. ತಾನು ವಾಡಾ ವ್ಯಾಪ್ತಿಯಲ್ಲೇ ಬರುವ ಸ್ವೀಡನ್ನಿನ ಐಡಿಟಿಎಂನಿಂದ ಪರೀಕ್ಷೆಗೊಳಗಾಗುತ್ತಿರುವುದರಿಂದ ತನಗೆ ನಾಡಾ ಪರೀಕ್ಷೆ ಬೇಡವೆಂದು ಹೇಳಿತ್ತು. ನಾಡಾ ಸಾಮರ್ಥ್ಯದ ಬಗ್ಗೆ ಇರುವ ಅನುಮಾನದಿಂದ ಬಿಸಿಸಿಐ ಉದ್ದೀಪನ ಪರೀಕ್ಷೆಯಿಂದ ದೂರವೇ ಉಳಿದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ನಮಗೆ ನಾಡಾ ಅಧಿಕಾರಿಗಳ ಬಗ್ಗೆ ನಂಬಿಕೆಯಿಲ್ಲ. ಈ ಹಿಂದೆ ಹಲವು ಬಾರಿ ಪರೀಕ್ಷಾ ಮಾದರಿಗಳನ್ನು ಅಸಮರ್ಪಕವಾಗಿ ನಾಡಾ ನಿಭಾಯಿಸಿದ ಬಗ್ಗೆ ಉದಾಹರಣೆಗಳಿವೆ. ಭಾರತದ ಕ್ರೀಡಾ ಇತಿಹಾಸದ ಪ್ರಮುಖರಾದ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ ಕೂಡ ಈ ವ್ಯಾಪ್ತಿಯಲ್ಲಿ ಬರುತ್ತಾರೆ. ಆಗ ನಾವು ಎಚ್ಚರಿಕೆಯಿಂದಲೇ ಹೆಜ್ಜೆಯಿಡಬೇಕೆಂದು ಹೇಳಿದ್ದಾರೆ.

ಬಿಸಿಸಿಐ ಮೇಲೆ ಸತತ ಒತ್ತಡ
ಆದರೆ ವಾಡಾ ಸತತವಾಗಿ ಬಿಸಿಸಿಐ ಮೇಲೆ ಒತ್ತಡ ಹೇರಿತ್ತು. ಬಿಸಿಸಿಐ ನಾಡಾ ವ್ಯಾಪ್ತಿಗೆ ಬರದಿದ್ದರೆ, ಪೂರ್ಣ ಭಾರತೀಯ ಕ್ರೀಡಾಸಂಸ್ಥೆಗಳನ್ನೇ ವಾಡಾದಿಂದ ಹೊರಗಿಡುತ್ತೇವೆ, ಇದರಿಂದ ಯಾವುದೇ ಅಂತಾರಾಷ್ಟ್ರೀಯ ಕೂಟದಲ್ಲಿ ಭಾರತೀಯರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲವೆಂದು ಹೆದರಿಸಲಾಗಿತ್ತು. ಅದಕ್ಕೆ ಬಿಸಿಸಿಐ ಸ್ವಲ್ಪವೂ ತಲೆಕೆಡಿಸಿಕೊಂಡಿರಲಿಲ್ಲ. ಕಡೆಗೆ ವಾಡಾ, ಐಸಿಸಿಯನ್ನೇ ತನ್ನ ವ್ಯಾಪ್ತಿಯಿಂದ ಹೊರಹಾಕುವುದಾಗಿ ಹೆದರಿಸಿತ್ತು. ಆದ್ದರಿಂದ ಐಸಿಸಿ, ಬಿಸಿಸಿಐ ಮೇಲೆ ನಾಡಾ ವ್ಯಾಪ್ತಿಗೆ ಬರುವಂತೆ ಒತ್ತಡ ಹೇರಿತ್ತು. ಅದೀಗ ಫ‌ಲ ನೀಡಿದೆ.

ತೆರಿಗೆ ಮನ್ನಕ್ಕೆ ಮನವಿ
2016ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ಗೆ ಕೇಂದ್ರ ಸರಕಾರ ತೆರಿಗೆ ಮನ್ನಾ ಮಾಡಿರಲಿಲ್ಲ. ಪರಿಣಾಮ, ಐಸಿಸಿಗೆ 150 ಕೋಟಿ ರೂ. ನಷ್ಟವಾಗಿತ್ತು. ಇದನ್ನು ಬಿಸಿಸಿಐ ತುಂಬಿಕೊಡಬೇಕೆಂದು ಐಸಿಸಿ ಹೇಳಿತ್ತು. ಕೇಂದ್ರದಲ್ಲಿ ನೂತನ ಸರಕಾರ ಅಸ್ಥಿತ್ವಕ್ಕೆ ಬಂದ ಮೇಲೆ, ಮತ್ತೆ ತೆರಿಗೆ ಮನ್ನಾ ಮಾಡಲು ಒತ್ತಾಯಿಸುತ್ತೇವೆ. ಅದಾದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಐಸಿಸಿಗೆ ಬಿಸಿಸಿಐ ಭರವಸೆ ನೀಡಿದೆ.

ಟಾಪ್ ನ್ಯೂಸ್

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

26post

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

quinton de kock

‘ಜನಾಂಗೀಯವಾದಿಯಲ್ಲ’: ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

27kannada

ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.