ಟಸ್ಕರ್ಸ್‌ ಮಾಲಕನ ವಿರುದ್ಧ ಲುಕ್‌ಔಟ್‌ ನೋಟಿಸ್‌

Team Udayavani, Nov 15, 2019, 10:25 PM IST

ಬೆಂಗಳೂರು: ಕೆಪಿಎಲ್‌ ಬೆಟ್ಟಿಂಗ್‌ ಹಾಗೂ ಮ್ಯಾಚ್‌ ಫಿಕ್ಸಿಂಗ್‌ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಳ್ಳಾರಿ ಟಸ್ಕರ್ಸ್‌ ತಂಡದ ಮಾಲಕ ಅರವಿಂದ್‌ ವೆಂಕಟೇಶ್‌ ರೆಡ್ಡಿ ವಿರುದ್ಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಕಾರ್ಯಪ್ಪ ವಿಚಾರಣೆ
ಇದೇ ವೇಳೆ ಐಪಿಎಲ್‌ ಹಾಗೂ ಕೆಪಿಎಲ್‌ ಆಟಗಾರ ಕೆ.ಸಿ. ಕಾರ್ಯಪ್ಪ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾರ್ಯಪ್ಪ ಕೆಪಿಎಲ್‌ನಲ್ಲಿ ಬಿಜಾಪುರ ಬುಲ್ಸ್‌ನಲ್ಲಿ ಆಟವಾಡಿದ್ದರು. ಐಪಿಎಲ್‌ನಲ್ಲಿ ಪಂಜಾಬ್‌ ಮತ್ತು ಕೊಲ್ಕತಾ ತಂಡವನ್ನು ಪ್ರತಿನಿಧಿಸಿದ್ದರು. ಈಗಾಗಲೇ ಬಂಧನಕ್ಕೊಳಗಾಗಿರುವ ಗೌತಮ್‌ ಹೇಳಿಕೆ ಮೇರೆಗೆ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ