ಭಾರತ-ಆಸ್ಟ್ರೇಲಿಯ ಜೋಡಿಯ ಪ್ರೇಮಪರ್ವ!
Team Udayavani, Nov 30, 2020, 8:03 AM IST
ಸಿಡ್ನಿ,: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯವು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಒಂದು ಕಡೆ ಕೊಹ್ಲಿ-ಅಯ್ಯರ್ ರನ್ ಬೆನ್ನಟ್ಟಲು ಹೋರಾಟ ನಡೆಸುತ್ತಿದ್ದರು. ಭಾರತದ ಮೊತ್ತ 2ಕ್ಕೆ 126 ರನ್ ಆಗಿತ್ತು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ವಿಚಿತ್ರವೊಂದು ಕಂಡುಬಂತು.
ಭಾರತೀಯ ಮೂಲದ ಯುವಕನೊಬ್ಬ, ಆಸ್ಟ್ರೇಲಿಯ ಯುವತಿಯೊಬ್ಬಳಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ. ಇದಕ್ಕೆ ಆಕೆಯ ಅಂಗೀಕಾರವೂ ಸಿಕ್ಕಿತು. ಈ ದೃಶ್ಯ ನೇರ ಪ್ರಸಾರ ಕಂಡಿತು. ಇದಕ್ಕೆ ಸಂಬಂಧಿಸಿದ ಟ್ವೀಟ್ ಎಲ್ಲಕಡೆ ಹರಿದಾಡಿತು. ಫೀಲ್ಡಿಂಗ್ ಮಾಡುತ್ತಿದ್ದ ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು!
ಕೊಹ್ಲಿ 22 ಸಾವಿರ ರನ್ ಪೂರ್ತಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ರವಿವಾರದ ಏಕದಿನ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್ ಪೂರ್ತಿಗೊಳಿಸಿದರು. ಅವರು ಈ ಸಾಧನೆಗೈದ ವಿಶ್ವದ 8ನೇ ಹಾಗೂ ಭಾರತ 3ನೇ ಬ್ಯಾಟ್ಸ್‌ಮನ್. ಕೊಹ್ಲಿ 462 ಇನ್ನಿಂಗ್ಸ್‌ಗಳಿಂದ 22,011 ರನ್ ಪೇರಿಸಿದ್ದಾರೆ. ಅತೀ ಕಡಿಮೆ 418 ಪಂದ್ಯಗಳಿಂದ ಈ ಮೈಲುಗಲ್ಲು ನೆಟ್ಟದ್ದು ಕೊಹ್ಲಿ ಪಾಲಿನ ಹೆಗ್ಗಳಿಕೆ.
34,357 ರನ್ ಬಾರಿಸಿದ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮತ್ತೋರ್ವ ಸಾಧಕ ರಾಹುಲ್ ದ್ರಾವಿಡ್. ಅವರ ಗಳಿಕೆ 24,208 ರನ್.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕ್ರಿಕೆಟ್ : ದೀಪಕ್ ಹೂಡಾ ಒಂದು ವರ್ಷ ಅಮಾನತು
ಆಲಾರೇ ಆಲಾ… ಅಜಿಂಕ್ಯ ಆಲಾ… : ತವರಿಗೆ ಮರಳಿದ ಕ್ರಿಕೆಟ್ ಹೀರೋಗಳು
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
ನಿಗದಿಯಂತೆ ಕಾಮನ್ವೆಲ್ತ್ ಗೇಮ್ಸ್: ಸಿಡಬ್ಲ್ಯುಜಿ ಫೆಡರೇಶನ್ ವಿಶ್ವಾಸ
ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್