2019ರ ವಿಶ್ವಕಪ್ ಧೋನಿ ಆಡ್ತಾರೆ: ಕೋಚ್ ರವಿಶಾಸ್ತ್ರಿ
Team Udayavani, Sep 2, 2017, 11:44 AM IST
ಕೊಲಂಬೊ: ಮಾಜಿ ನಾಯಕ ಎಂ.ಎಸ್.ಧೋನಿ 2019ರ ಏಕದಿನ ವಿಶ್ವಕಪ್ನಲ್ಲಿ ಆಡುತ್ತಾರೆ ಎಂಬ ಸ್ಪಷ್ಟ ಉತ್ತರವನ್ನು ಕೋಚ್ ರವಿಶಾಸ್ತ್ರಿ ನೀಡಿದ್ದಾರೆ. ಇತ್ತೀಚೆಗೆ ಧೋನಿ 2019ರಲ್ಲಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲ ಹುಟ್ಟಿಕೊಂಡಿದ್ದವು. ಅದಕ್ಕೆ ಸರಿಯಾಗಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್ ಕೂಡ ಧೋನಿ ಚೆನ್ನಾಗಿ ಆಡದಿದ್ದರೆ ನಾವು ಪರ್ಯಾಯ ಹುಡುಕಬೇಕಾಗುತ್ತದೆ ಎಂದಿದ್ದರು.
ಇದೀಗ ರವಿಶಾಸ್ತ್ರಿ, ಧೋನಿ 2019ರ ಯೋಜನೆ ಯಲ್ಲಿದ್ದಾರೆ. ಅವರು ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿರುವ ಜೀವಂತ ದಂತಕಥೆ. ಕ್ರೀಡೆಗೆ ಆಭರಣವಿದ್ದಂತೆ. ಮೇಲೆ ಅವರ ಪ್ರಭಾವ ಬಹಳಷ್ಟಿದೆ. ಅದರ ಬಗ್ಗೆ ಗೊಂದಲ ಬೇಡ ಎಂದು ರವಿಶಾಸ್ತ್ರಿ ಖಚಿತ ಪಡಿಸಿದ್ದಾರೆ.
ಅಂಪೈರ್ ವೈಡ್ ತೀರ್ಪನ್ನು ಔಟಾಗಿ ಬದಲಿಸಿದ ಧೋನಿ
ಕೊಲಂಬೊ: ಎಂ.ಎಸ್.ಧೋನಿ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಗುರುವಾರ ಭಾರತ ಪರ ಪಾದಾರ್ಪಣೆ ಮಾಡಿದ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಎಸೆತವೊಂದನ್ನು ಅಂಪೈರ್ ವೈಡ್ ಎಂದು ತೀರ್ಪು ನೀಡಿದರು. ಆದರೆ ಧೋನಿ ಚೆಂಡು ಡಿಕ್ವೆಲ್ಲ ಬ್ಯಾಟ್ಗೆ ತಾಕಿದೆ ಎಂದು ಬಲವಾಗಿ ಹೇಳಿದರು. ಡಿಆರ್ ಎಸ್ನಲ್ಲಿ ಧೋನಿ ಹೇಳಿದ್ದು ಸತ್ಯವಾಯಿತು. ಅವರ ಸೂಕ್ಷ್ಮ ಗ್ರಹಣಶಕ್ತಿ ಅಚ್ಚರಿ ಮೂಡಿಸಿದೆ.