ಐಪಿಎಲ್ ಕಮೆಂಟ್ರಿ ತಂಡದಲ್ಲಿ ಸಂಗಕ್ಕರ
Team Udayavani, May 19, 2018, 6:00 AM IST
ಹೊಸದಿಲ್ಲಿ: ಶ್ರೀಲಂಕಾದ ಮಾಜಿ ಸ್ಟಂಪರ್ ಕುಮಾರ ಸಂಗಕ್ಕರ ಶೀಘ್ರದಲ್ಲಿ ಐಪಿಎಲ್ ಕಮೆಂಟ್ರಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೂಟದ ಕೊನೆಯ ಹಂತದ ಪಂದ್ಯಗಳ ವೇಳೆ ವೀಕ್ಷಕ ವಿವರಣೆ, ವಿಶ್ಲೇಷಣೆ ಹಾಗೂ ಅನುಭವವನ್ನು ಬಿಚ್ಚಿಡಲಿ ದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳೆ ಸಂಗಕ್ಕರ ಮೊದಲ ಬಾರಿಗೆ ವೀಕ್ಷಕ ವಿವರಣಕಾರನಾಗಿ ಕಾಣಿಸಿಕೊಂಡಿದ್ದರು. ಆದರೆ ಮುಂಬರುವ ಇಂಗ್ಲೆಂಡ್-ಪಾಕಿಸ್ಥಾನ, ಇಂಗ್ಲೆಂಡ್-ಭಾರತ ನಡುವಿನ ಸರಣಿಗಾಗಿ “ಸ್ಕೈ ನ್ಪೋರ್ಟ್ಸ್’ ಚಾನೆಲ್ನಿಂದ ಬಂದ ಕಮೆಂಟ್ರಿ ಆಹ್ವಾನವನ್ನು ಸಂಗಕ್ಕರ ತಿರಸ್ಕರಿಸಿದ್ದಾರೆ.
ಲಂಕಾ ಪರ 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ ಗಳನ್ನಾಡಿರುವ ಸಂಗಕ್ಕರ 26 ಸಾವಿರ ರನ್ ಪೇರಿಸಿದ್ದಾರೆ.