ಮಲೇಶ್ಯಾ ಓಪನ್: ಸಮೀರ್ಗೆ ಸೋಲಿನ ಆಘಾತ
Team Udayavani, Apr 3, 2019, 5:54 AM IST
ಕೌಲಾಲಂಪುರ: ಭಾರತದ ಸಮೀರ್ ವರ್ಮ “ಮಲೇಶ್ಯಾ ಓಪನ್’ ಬ್ಯಾಡ್ಮಿಂಟನ್ ಕೂಟದ ಮೊದಲ ಪಂದ್ಯದಲ್ಲೇ ಸೋಲಿನ ಅಘಾತ ಅನುಭವಿಸಿದ್ದಾರೆ.
ಮಂಗಳವಾರ ಆರಂಭವಾದ ಈ ಕೂಟದ ಮೊದಲ ಪಂದ್ಯದಲ್ಲಿ ಸಮೀರ್ ವರ್ಮ ವಿಶ್ವದ 2ನೇ ರ್ಯಾಂಕಿನ ಚೀನದ ಆಟಗಾರ ಶೀ ಯೂಕಿ ಅವರ ವಿರುದ್ಧ 20-22, 23-21, 12-21 ಗೇಮ್ಗಳಿಂದ ಸೋಲನುಭವಿಸಿದರು.
ಮೊದಲ ಗೇಮ್ ಕಳೆದುಕೊಂಡ ಸಮೀರ್ ದ್ವಿತೀಯ ಗೇಮ್ನಲ್ಲಿ ಭಾರೀ ಹೋರಾಟದ ಬಳಿಕ ಗೆದ್ದರು. ಆದರೆ ನಿರ್ಣಾಯಕ ಗೇಮ್ನಲ್ಲಿ ಯೂಕಿ ಆಟದ ಎದುರು ಮಂಕಾದರು.
ಪ್ರಣವ್-ಸಿಕ್ಕಿ ಶುಭಾರಂಭ
ಮಿಕ್ಸೆಡ್ ಡಬಲ್ಸ್ನಲ್ಲಿ ಭಾರತದ ಪ್ರಣವ್ ಜೆರ್ರಿ ಜೋಪ್ರಾ-ಎನ್. ಸಿಕ್ಕಿ ರೆಡ್ಡಿ ಜೋಡಿ ಐರ್ಲೆಂಡ್ನ ಸ್ಯಾಮ್ ಮ್ಯಾಗಿ-ಕ್ಲೋ ಮ್ಯಾಗಿ ಜೋಡಿ ವಿರುದ್ಧ 22-20, 24-22 ಗೇಮ್ಗಳ ಗೆಲುವು ದಾಖಲಿಸಿತು.