ಕಡ್ಡಾಯ ವಿಶ್ರಾಂತಿ: ಗಂಭೀರ್‌ ವಿರೋಧ

Team Udayavani, Nov 14, 2019, 12:21 AM IST

ಹೊಸದಿಲ್ಲಿ: ಇನ್ನು 10 ತಿಂಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್‌ ಗಂಗೂಲಿ ಕೆಳಕ್ಕಿಳಿಯಬೇಕೆಂಬುದು ನಾಚಿಕೆಗೇಡು ಎಂದು ಮಾಜಿ ಕ್ರಿಕೆಟಿಗ, ದಿಲ್ಲಿ ಸಂಸದ ಗೌತಮ್‌ ಗಂಭೀರ್‌ ಹೇಳಿದ್ದಾರೆ. ನೇರ ಮಾತುಗಳಿಗೆ ಹೆಸರುವಾಸಿಯಾಗಿರುವ ಗಂಭೀರ್‌, 6 ವರ್ಷಗಳ ಅಧಿಕಾರಾವಧಿ ಅನಂತರ 3 ವರ್ಷಗಳ ಕಡ್ಡಾಯ ವಿಶ್ರಾಂತಿ ಎಂಬ ಬಿಸಿಸಿಐ ನಿಯಮಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

“ನಾನು ಕಡ್ಡಾಯ ವಿಶ್ರಾಂತಿ ನಿಯಮದ ವಿರೋಧಿ. ಭಾರತೀಯ ಕ್ರಿಕೆಟಿಗೆ ಸೌರವ್‌ ಗಂಗೂಲಿಯಂತಹ ಸಮರ್ಥರು ಬೇಕು. ಅವರಿಗೆ ಸಮಗ್ರ ಬೆಳವಣಿಗೆಯ ಬಗ್ಗೆ ಶ್ರದ್ಧೆ ಇದೆ. ಮಾತ್ರವಲ್ಲ, ಅವರಿಗೆ ತಮ್ಮ ಶಕ್ತಿಗಿಂತ ಹೆಚ್ಚಾಗಿ ತಮ್ಮ ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಇದನ್ನು ಹೇಗೆ ನಿಭಾಯಿಸಬೇಕೆಂಬ ತಿಳಿವಳಿಕೆಯೂ ಇದೆ. 10 ತಿಂಗಳ ಬಳಿಕ ದಾದಾ ಕೆಳಗಿಳಿ ಯಬೇಕೆನ್ನುವುದು ನಾಚಿಕೆಗೇಡು’ ಎಂದು ಗಂಭೀರ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ