ಮರಳಿದ ಮನೀಷ್ ಮಿಂಚಿನ ಶತಕ: 10 ಸಿಕ್ಸರ್ ಬಾರಿಸಿದ ಪಾಂಡೆ

Team Udayavani, Nov 12, 2019, 12:41 PM IST

ಸಾಂದರ್ಭಿಕ ಚಿತ್ರ ಬಳಸಲಾಗಿದೆ.

ವಿಶಾಖಪಟ್ಟಣಂ: ಸಯ್ಯದ್ ಮುಷ್ತಾಕ್ ಅಲಿ ಟಿ ಟ್ವೆಂಟಿ ಲೀಗ್ ನ ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ.

ಇಲ್ಲಿನ ಪಿವಿಜಿ ರಾಜು ಆಂದ್ರ ಪ್ರದೇಶ ಕ್ರಿಕೆಟ್ ಅಕಾಡಮೆ ಸ್ಪೋರ್ಟ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸರ್ವೀಸಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿತು.  ಕರ್ನಾಟಕದ ಆರಂಭಿಕ ಆಟಗಾರ ರೋಹನ್ ಕದಮ್ ನಾಲ್ಕು ರನ್ ಗೆ ಔಟ್ ಆದರು.

ನಂತರ ದೇವದತ್ ಪಡಿಕ್ಕಲ್ ಸೇರಿಕೊಂಡ ನಾಯಕ ಪಾಂಡೆ ಎರಡನೇ ವಿಕೆಟ್ ಗೆ 167 ರನ್ ಜೊತೆಯಾಟವಾಡಿದರು. ಕಳೆದ ಪಂದ್ಯದ ಶತಕವೀರ ಪಡಿಕ್ಕಲ್ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 75 ರನ್ ಮಾಡಿ ವಿಕೆಟ್ ಒಪ್ಪಿಸಿದರು.

ಭಾರತ ತಂಡದ ಡ್ಯೂಟಿ ಮುಗಿಸಿ ಕರ್ನಾಟಕ ತಂಡಕ್ಕೆ ಮರಳಿರುವ ಪಾಂಡೆ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 54 ಎಸೆತ ಎದುರಿಸಿದ ಮನೀಷ್ ಅಜೇಯ 129 ರನ್ ಬಾರಿಸಿದರು.  ಈ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಮತ್ತು ಭರ್ಜರಿ 10 ಸಿಕ್ಸರ್ ಬಾರಿಸಿದರು.

ಪಾಂಡೆ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟದಲ್ಲಿ 250 ರನ್ ಗಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ