ವಿಶ್ವ ಕಿರಿಯರ ಕುಸ್ತಿ: ಮಂಜು ಕುಮಾರಿಗೆ ಕಂಚು
Team Udayavani, Aug 5, 2017, 6:30 AM IST
ಹೊಸದಿಲ್ಲಿ: ವಿಶ್ವ ಕಿರಿಯರ ಕುಸ್ತಿ ಕೂಟದಲ್ಲಿ ಭಾರತದ ಮಂಜು ಕುಮಾರಿ ಕಂಚಿನ ಪದಕ ಗೆದ್ದಿದ್ದಾರೆ. ಇವರು 59 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ 2-0 ಅಂತರದಿಂದ ಉಕ್ರೈನಿನ ಇಲೋನಾ ಪ್ರೊಕೊಪೆವಿನುಕ್ ಅವರನ್ನು ಸೋಲಿಸಿದರು.
ಇದರೊಂದಿಗೆ ಫಿನ್ಲಾÂಂಡ್ನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಭಾರತ ಒಟ್ಟಾರೆ 2ನೇ ಪದಕ ಗೆದ್ದಂತಾಯಿತು. ಬುಧವಾರವಷ್ಟೇ ಭಾರತ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದನ್ನು ಸ್ಮರಿಸಬಹುದು. ಇದಕ್ಕೂ ಮುನ್ನ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಮಂಜು ಕುಮಾರಿ 5-1 ಅಂತರದಿಂದ ಬಲ್ಗೇರಿಯಾದ ಅಲೆಕ್ಸಾಂಡರಿನಾ ಅವರನ್ನು ಸೋಲಿಸಿದ್ದರು. ಆದರೆ ಕ್ವಾರ್ಟರ್ಫೈನಲ್ನಲ್ಲಿ ಜಪಾನ್ ಆಟಗಾರ್ತಿ ಯೂಜುರು ಕುಮಾನೊ ವಿರುದ್ಧ ಸೋತು ಸೆಮಿಫೈನಲ್ನಿಂದ ಔಟಾಗಿದ್ದರು. ಹೀಗಿದ್ದರೂ ಮಂಜು ಎದುರು ಗೆದ್ದಿದ್ದ ಜಪಾನ್ ಆಟಗಾರ್ತಿ ಫೈನಲ್ನಲ್ಲಿ ಗೆದ್ದಿದ್ದರಿಂದ ಮಂಜಿಗೆ ರಿಪಿಚಾಜ್ನಲ್ಲಿ ಅವಕಾಶ ಸಿಕ್ಕಿತು.