ವಿಶ್ವಕಪ್: ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟ ಭಾರತದ ಮನು ಬಾಕರ್

Team Udayavani, Nov 21, 2019, 11:50 AM IST

ಪುತಿಯಾನ್( ಚೀನಾ): ಭಾರತದ ಶೂಟರ್ ಮನು ಬಾಕರ್ ವಿಶ್ವಕಪ್ ಶೂಟಿಂಗ್ ಫೈನಲ್ ನಲ್ಲಿ ಬಂಗಾರದ ಪದಕಕ್ಕೆ ಗುರಿಯಿಟ್ಟಿದ್ದಾರೆ.

ಗುರುವಾರ ನಡೆದ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಒಟ್ಟು 244.7 ಅಂಕ ಪಡೆದ ಮನು ಬಾಕರ್ ಕಿರಿಯರ ವಿಭಾಗದಲ್ಲಿ ವಿಶ್ವದಾಖಲೆ ಬರೆದರು.

ಈ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ಪಾಲಿಗೆ ಒಲಿದ ಮೊದಲ ಬಂಗಾರದ ಪದಕವಾಗಿದೆ.

17ರ ಹರೆಯದ ಮನು ಬಾಕರ್ ಸಾಧನೆಗೆ ಕ್ರೀಡಾ ವಲಯ ಮೆಚ್ಚುಗೆ ಸೂಚಿಸಿದ್ದು, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ