ಮರಿಯಾ ಶರಪೋವಾ ಮುಂದಿನ ತಿಂಗಳು ಕಣಕ್ಕೆ
Team Udayavani, Mar 13, 2017, 12:03 PM IST
ಬರ್ಲಿನ್: ಉದ್ದೀಪನ ಮದ್ದು ಸೇವನೆಯಿಂದ ರಷ್ಯಾದ ಟೆನಿಸ್ ಸುಂದರಿ ಮರಿಯಾ ಶರಪೋವಾ ಮೇಲೆ ಹೆರಿದ್ದ 15 ತಿಂಗಳ ನಿಷೇಧದ ಅವಧಿ ಎ. 26ಕ್ಕೆ ಅಂತ್ಯವಾಗಲಿದೆ. ವಿಶೇಷವೆಂದರೆ, ಅಂದೇ ಶರಪೋವಾ ಅಂತಾರಾಷ್ಟ್ರೀಯ ಟೆನಿಸ್ಗೆ ಮರಳಲು ಸಜ್ಜಾಗಿದ್ದಾರೆ!
5 ಬಾರಿಯ ಗ್ರ್ಯಾನ್ಸ್ಲಾಮ್ ವಿಜೇತ ಶರಪೋವಾಗೆ ಎ. 24ರಿಂದ ಜರ್ಮನಿಯಲ್ಲಿ ಆರಂಭವಾಗಲಿರುವ ಪೋರ್ಷೆ ಗ್ರ್ಯಾನ್ಪ್ರಿ ಟೆನಿಸ್ ಟೂರ್ನಿಯಲ್ಲಿ ಆಡಲು ವೈಲ್ಡ್ಕಾರ್ಡ್ ಸಿಕ್ಕಿದೆ. ಹೀಗಾಗಿ ಎ. 26ರಂದು ಶರಪೋವಾ ಸಿಂಗಲ್ಸ್ ಆಡಲಿದ್ದಾರೆ.
ವೋಜ್ನಿಯಾಕಿ ಅಸಮಾಧಾನ
ಈ ನಡುವೆ ಶರಪೋವಾ ನಡೆಗೆ ಶರಪೋವಾಗೆ ಅವಕಾಶ ನೀಡಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆಕೆ ಅತ್ಯುತ್ತಮ ಆಟಗಾರ್ತಿ. ಆದರೆ ನಿಷೇಧದ ಅವಧಿ ಅಂತ್ಯವಾಗುವುದೇ ಎ. 26ರಂದು. ಟೂರ್ನಿ ಆರಂಭ ವಾಗುವುದು ಎ. 24ರಿಂದ. ಹೀಗಾಗಿ ಇದು ಇತರ ಆಟಗಾರರಿಗೆ ಮತ್ತು ಎಟಿಪಿಗೆ ಅಗೌರವ ಸೂಚಿಸಿದಂತೆ ಆಗುವ ಸಾಧ್ಯತೆಯಿದೆ ಎಂದು ಮಾಜಿ ವಿಶ್ವ ನಂ.1 ಆಟಗಾರ್ತಿ ಡೆನ್ಮಾರ್ಕ್ನ ಕ್ಯಾರೋಲಿನ್ ವೋಜ್ನಿಯಾಕಿ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ