ಮೇರಿ ಕೋಮ್‌, ಸಿಂಧು ಸೇರಿ 9 ಮಹಿಳಾ ಕ್ರೀಡಾಪಟುಗಳ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು

Team Udayavani, Sep 12, 2019, 12:39 PM IST

ಹೊಸದಿಲ್ಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ಒಂಬತ್ತು ಮಂದಿ ಮಹಿಳಾ ಕ್ರೀಡಾಪಟುಗಳ ಹೆಸರನ್ನು ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.  ಮೇರಿ ಕೋಮ್‌, ಪಿ.ವಿ ಸಿಂಧು ಸೇರಿ ಒಂಬತ್ತು ಕ್ರೀಡಾಪಟುಗಳ ಹೆಸರನ್ನು ಕ್ರೀಡಾ ಸಚಿವಾಲಯ ಗೃಹ ಇಲಾಖೆಗೆ ಕಳುಹಿಸಿದೆ.

ಆರು ಬಾರಿಯ ವಿಶ್ವಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಿದ್ದರೆ, ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು ಅವರ ಹೆಸರನ್ನು ಪದ್ಮಭೂಷನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕುಸ್ತಿ ಪಟು ವಿನೀಶ್‌ ಪೋಗಟ್‌, ಟೇಬಲ್‌ ಟೆನ್ನಿಸ್‌ ತಾರೆ ಮಣಿಕಾ ಬಾತ್ರ, ಕ್ರಿಕೆಟ್‌ ಟಿ ಟ್ವೆಂಟಿ ನಾಯಕಿ ಹರ್ಮನ್‌ ಪ್ರೀರ್‌ ಕೌರ್‌, ಹಾಕಿ ನಾಯಕಿ ರಾಣಿ ರಾಂಪಾಲ್‌, ಶೂಟರ್‌ ಸುಮಾ ಶಿರೂರ್‌, ಅವಳಿ ಪರ್ವತಾರೋಹಿಗಳಾದ ತಾಶಿ ಮತ್ತು ನಂಗ್ಶಿ ಮಲಿಕ್‌ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ