ಕೊರಿಯ ಮಾಸ್ಟರ್ : ಶ್ರೀಕಾಂತ್‌, ಸಮೀರ್‌ ಮುನ್ನಡೆ

Team Udayavani, Nov 21, 2019, 1:16 AM IST

ಗ್ವಾಂಗ್‌ಝು (ಕೊರಿಯ): ಭಾರತದ ಫೇವರಿಟ್‌ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಸಮೀರ್‌ ವರ್ಮ ಅವರು ಪ್ರತಿಷ್ಠಿತ ಕೊರಿಯ ಮಾಸ್ಟರ್ ಬ್ಯಾಡ್ಮಿಂಟನ್‌ ಕೂಟದ ಪುರುಷ ಸಿಂಗಲ್ಸ… ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಸೌರಭ್‌ ವರ್ಮ ಅವರು ಸ್ಥಳೀಯ ಫೇವರಿಟ್‌ ಕಿಮ್‌ ಡಾಂಘನ್‌ ವಿರುದ್ಧ ಸೋಲಿನ ಆಘಾತ ಎದುರಿಸಿ ಕೂಟದಿಂದಲೇ ನಿರ್ಗಮಿಸಿದ್ದಾರೆ.

ಬುಧವಾರ ನಡೆದ 6ನೇ ಶ್ರೇಯಾಂಕದ ಕೆ. ಶ್ರೀಕಾಂತ್‌ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರನ್ನು 21 18, 21 17 ನೇರ ಗೇಮ್‌ಗಳಲ್ಲಿ ಸುಲಭವಾಗಿ ಮಣಿಸಿ ಮುನ್ನಡೆದರು. ಮಾಜಿ ನಂಬರ್‌ ವನ್‌ ಆಟಗಾರರಾಗಿರುವ ಶ್ರೀಕಾಂತ್‌ ಅವರು ಕೇವಲ 37 ನಿಮಿಷಗಳಲ್ಲಿ ಈ ಗೆಲುವು ಸಂಪಾದಿಸಿದರು. ದ್ವಿತೀಯ ಸುತ್ತಿನಲ್ಲಿ ಶ್ರೀಕಾಂತ್‌ ಜಪಾನಿನ ಕಾಂತ ಸುನೆಯಾಮ ಅವರ ಸವಾಲನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ ಸಮೀರ್‌ ವರ್ಮ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಎದುರಾಳಿ ಜಪಾನಿನ ಕಝುಮಸ ಸಕಾç ಪಂದ್ಯದ ನಡುವೆ ಹಿಂದೆ ಸರಿದ ಪರಿಣಾಮ ಸಮೀರ್‌ ಮುನ್ನಡೆದರು. ಸಕಾç ಪಂದ್ಯ ತ್ಯಜಿಸಿದಾಗ 8 11ರಿಂದ ಹಿನ್ನಡೆಯಲ್ಲಿದ್ದರು. ಸಮೀರ್‌ ಅವರ ಮುದಿನ ಎದುರಾಳಿ ಡಾಂಘನ್‌.

ಸೌರಭ್‌ಗೆ ಸೋಲು
ಸ್ಥಳೀಯ ಫೇವರಿಟ್‌ ಕಿಮ್‌ ಡಾಂಘನ್‌ ಅವರೊಂದಿಗೆ ಕಠಿನ ಹೋರಾಟದ ಬಳಿಕ ಸೌರಭ್‌ 21 13, 12 21, 13 21ರ ಅಂತರದಲ್ಲಿ ಸೋಲೊಪ್ಪಿಕೊಂಡು ಕೂಟದಿಂದ ನಿರ್ಗಮಿಸಿದರು. ಮೊದಲ ಗೇಮ್‌ ಗೆದ್ದರೂ ಮುಂದಿನೆರಡು ಗೇಮ್‌ಗಳಲ್ಲಿ ಡಾಂಘನ್‌ ವಿರುದ್ಧ ಹಿಡಿತ ಸಾಧಿಸಲು ಸೌರಭ್‌ ಅವರಿಗೆ ಸಾಧ್ಯವಾಗಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ