ಈ ಡ್ರಾ ದ್ರಾವಿಡ್‌ಗೆ ಅರ್ಪಣೆ!
Team Udayavani, Jan 12, 2021, 7:10 AM IST
ಗಾವಸ್ಕರ್ ಯುಗ, ಅನಂತರ ದ್ರಾವಿಡ್-ಲಕ್ಷ್ಮಣ್ ಕಾಲದಲ್ಲಿ ಭಾರತ ಇಂಥದೊಂದು ಡ್ರಾ ಸಾಧನೆ ಮಾಡಿದ್ದರೆ ಅದು “ಮಹಾನ್’ ಎನಿಸಿಕೊಳ್ಳುತ್ತಿರಲಿಲ್ಲ. ಅಂದಿಗೆ ಅದು ಸಹಜವಾಗಿತ್ತು. ಆದರೆ ಕಾಲ ಬದಲಾಗಿದೆ. ಟಿ20 ಅಬ್ಬರಿಸುತ್ತಿದೆ. ಟೆಸ್ಟ್ ಪಂದ್ಯಗಳೆಲ್ಲ 3-4 ದಿನಗಳಲ್ಲೇ ಫಲಿತಾಂಶ ಕಾಣುವ ಕಾಲ ಘಟ್ಟವಿದು. ನಿಂತು ಆಡುವ ಇಂಥ “ಟೆಸ್ಟ್ ಗೇಮ್’ ಅವರ ಕಾಲದಲ್ಲೇ ಮುಗಿದು ಹೋಯಿತು ಎಂದು ಅಭಿಮಾನಿಗಳು ಎಂದೋ ಷರಾ ಬರೆದಾಗಿದೆ. ಹೀಗಿರುವಾಗ ಗಾಯಾಳು ಭಾರತ ಸಿಡ್ನಿ ಟ್ರ್ಯಾಕ್‌ನಲ್ಲಿ 4 ಅವಧಿಗಳ ದಿಟ್ಟ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ದ್ರಾವಿಡ್ ಆಟವನ್ನು ನೆನಪಿಸಿದ್ದು ಸುಳ್ಳಲ್ಲ.
ಇಲ್ಲೊಂದು ಸ್ವಾರಸ್ಯವಿದೆ. ಸೋಮವಾರ “ದಿ ಗ್ರೇಟ್ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ 48ನೇ ಜನ್ಮದಿನದ ಸಂಭ್ರಮ. ಈ ದಿನದಂದೇ, ಸೋಲಲಿದ್ದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಭಾರತ ಮಹಾನ್ ಸಾಧನೆಗೈದಿದೆ. “ಈ ಡ್ರಾ ದ್ರಾವಿಡ್‌ಗೆ
ಅರ್ಪಣೆ’ ಎಂದು ನೆಟ್ಟಿಗರು ಸಂಭ್ರಮಿಸುತ್ತಿದ್ದಾರೆ. ದ್ರಾವಿಡ್ ಪಾಲಿಗೆ ಇದೊಂದು ಅರ್ಥ ಪೂರ್ಣ ಬರ್ತ್ ಡೇ ಎಂದು ಐಸಿಸಿ ಟ್ವೀಟ್ ಮಾಡಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444