ಮ್ಯಾಥ್ಯೂಸ್ ಶತಕ; ಲಂಕಾ ಚೇತರಿಕೆ
Team Udayavani, Jan 23, 2021, 7:10 AM IST
ಗಾಲೆ: ಅನುಭವಿ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಶ್ರೀಲಂಕಾ ಚೇತರಿಕೆ ಕಂಡಿದ್ದು, 4 ವಿಕೆಟಿಗೆ 229 ರನ್ ಗಳಿಸಿದೆ. ಇದರಲ್ಲಿ ಮ್ಯಾಥ್ಯೂಸ್ ಪಾಲು ಅಜೇಯ 107 ರನ್.
228 ಎಸೆತ ಎದುರಿಸಿ ನಿಂತಿರುವ ಮ್ಯಾಥ್ಯೂಸ್ 11 ಬೌಂಡರಿ ನೆರವಿ ನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದ್ದಾರೆ. ಇದು 88ನೇ ಟೆಸ್ಟ್‌ನಲ್ಲಿ ಮ್ಯಾಥ್ಯೂಸ್ ಬಾರಿಸಿದ 11ನೇ ಶತಕ.
ಲಂಕೆಯ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 7 ರನ್ ಆಗುವಷ್ಟರಲ್ಲಿ ಕುಸಲ್ ಪೆರೆರ (6) ಮತ್ತು ಒಶಾದ ಫೆರ್ನಾಂಡೊ (0) ವಿಕೆಟ್ ಉರುಳಿತು. ಆರಂಭಕಾರ ಲಹಿರು ತಿರಿಮನ್ನೆ 43 ಮತ್ತು ನಾಯಕ ದಿನೇಶ್ ಚಂಡಿಮಾಲ್ 52 ರನ್ ಹೊಡೆದರು. ಮ್ಯಾಥ್ಯೂಸ್-ಚಂಡಿಮಾಲ್ ಜೋಡಿಯಿಂದ 4ನೇ ವಿಕೆಟಿಗೆ 117 ರನ್ ಸಂಗ್ರಹ ಗೊಂಡಿತು.
ಇಂಗ್ಲೆಂಡ್ ಪರ ವೇಗಿ ಜೇಮ್ಸ್ ಆ್ಯಂಡರ್ಸನ್ 24 ರನ್ನಿಗೆ 3 ವಿಕೆಟ್ ಉರುಳಿಸಿದರು. ಮೊದಲ ಟೆಸ್ಟ್ ಗೆದ್ದ ಇಂಗ್ಲೆಂಡ್ 1-0 ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ದಿನ, ಆ ವರ್ಷ : ಸ‘ಚಿನ್ನ’ ಡಬಲ್ ಸೆಂಚೂರಿ..!
ಪಿಂಕ್ ಬಾಲ್ ನಲ್ಲಿ ಅಕ್ಷರ್ – ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು
ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಇನ್ನು ನರೇಂದ್ರ ಮೋದಿ ಸ್ಟೇಡಿಯಂ
ಮೊಟೆರಾದಲ್ಲಿ ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದ ರೂಟ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ
ಹಲವು ದಾಖಲೆಗಳ ಸರದಾರ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ