Udayavni Special

ಬ್ಯಾಟಿಂಗ್‌ ಲಯಕ್ಕೆ ಮರಳಿದ ಅಗರ್ವಾಲ್‌, ರಿಷಭ್‌ ಪಂತ್‌


Team Udayavani, Feb 17, 2020, 6:09 AM IST

agarwal

ಹ್ಯಾಮಿಲ್ಟನ್‌: ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ತಮ್ಮ ಜನ್ಮದಿನಕ್ಕೆ ಹೊಸ ಮೆರುಗು ತಂದಿತ್ತಿದ್ದಾರೆ. ಜತೆಗೆ ನ್ಯೂಜಿಲ್ಯಾಂಡ್‌ನ‌ಲ್ಲಿ ಈವರೆಗೆ ವೀಕ್ಷಕನಾಗಿಯೇ ಉಳಿದಿರುವ ರಿಷಭ್‌ ಪಂತ್‌ ಕೂಡ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವೊಂದನ್ನು ನೀಡಿದ್ದಾರೆ. ನಿರೀಕ್ಷೆಯಂತೆ ಡ್ರಾದಲ್ಲಿ ಕೊನೆಗೊಂಡ ತ್ರಿದಿನ ಅಭ್ಯಾಸ ಪಂದ್ಯದ ಕೊನೆಯ ದಿನ ಇವರಿಬ್ಬರು ಆಕರ್ಷಣೆಯ ಕೇಂದ್ರವಾದರು.

ಪಂದ್ಯ ಕೊನೆಗೊಳ್ಳುವಾಗ ಭಾರತ 4 ವಿಕೆಟಿಗೆ 252 ರನ್‌ ಮಾಡಿತ್ತು. ಇದರಲ್ಲಿ ಅಗರ್ವಾಲ್‌ ಕೊಡುಗೆ 81 ರನ್ನುಗಳಾದರೆ, ಪಂತ್‌ 70 ರನ್‌ ಮಾಡಿದರು. ಪೃಥ್ವಿ ಶಾ 39, ವೃದ್ಧಿಮಾನ್‌ ಸಾಹಾ ಔಟಾಗದೆ 30 ರನ್‌ ಮಾಡಿದರು. ಆದರೆ ಓಪನಿಂಗ್‌ ರೇಸ್‌ನಲ್ಲಿದ್ದ ಶುಭಮನ್‌ ಗಿಲ್‌ (8) ಅವರ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು.

ಬರ್ತ್‌ಡೇ ಬಾಯ್‌ ಅಗರ್ವಾಲ್‌
ಮೊದಲ ಸರದಿಯಲ್ಲಿ ಶಾ ಖಾತೆ ತೆರೆಯಲು ವಿಫ‌ಲರಾಗಿದ್ದರು. ಅಗರ್ವಾಲ್‌ ಒಂದೇ ರನ್ನಿಗೆ ವಿಕೆಟ್‌ ಒಪ್ಪಿಸಿದ್ದರು. ಹೀಗಾಗಿ ಟೆಸ್ಟ್‌ ಸರಣಿಯಲ್ಲಿ ಭಾರತದ ಓಪನಿಂಗ್‌ ಕತೆ ಏನು ಎಂಬ ಬಗ್ಗೆ ಸಹಜವಾಗಿಯೇ ಚಿಂತೆ ಕಾಡಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇವರಿಬ್ಬರೂ ಬ್ಯಾಟಿಂಗ್‌ ಫಾರ್ಮ್ ಕಂಡುಕೊಳ್ಳುವುದರೊಂದಿಗೆ ಭಾರತದ ಆರಂಭಿಕರ ಸಮಸ್ಯೆ ಬಗೆಹರಿದಿದೆ ಎನ್ನಲಡ್ಡಿಯಿಲ್ಲ. ಇವರಿಂದ ಮೊದಲ ವಿಕೆಟಿಗೆ 9.5 ಓವರ್‌ಗಳಿಂದ 72 ರನ್‌ ಹರಿದು ಬಂತು.

ಆರಂಭಿಕರಿಬ್ಬರೂ ಬಿರುಸಿನ ಆಟಕ್ಕಿಳಿದರು. ರವಿವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಾಯಾಂಕ್‌ ಅಗರ್ವಾಲ್‌ ಅವರ 81 ರನ್‌ 99 ಎಸೆತಗಳಿಂದ ಬಂತು. ಇದರಲ್ಲಿ 10 ಬೌಂಡರಿ ಜತೆಗೆ 3 ಸಿಕ್ಸರ್‌ ಸೇರಿತ್ತು. ಶಾ 31 ಎಸೆತಗಳಿಂದ 39 ರನ್‌ ಬಾರಿಸಿದರು (6 ಬೌಂಡರಿ, 1 ಸಿಕ್ಸರ್‌). ಈ ಪಂದ್ಯಕ್ಕೂ ಮುನ್ನ 10 ಪಂದ್ಯಗಳ 11 ಇನ್ನಿಂಗ್ಸ್‌ಗಳನ್ನಾಡಿದ್ದ ಅಗರ್ವಾಲ್‌ ಒಮ್ಮೆಯೂ 80 ರನ್‌ ಗಡಿ ದಾಟಿರಲಿಲ್ಲ. ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯಗಳಲ್ಲಂತೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದರು.

ಪಂತ್‌ ಪ್ರಚಂಡ ಬ್ಯಾಟಿಂಗ್‌
ಗಿಲ್‌ ಬೇಗನೇ ಪೆವಿಲಿಯನ್‌ ಸೇರಿಕೊಂಡ ಬಳಿಕ ಬ್ಯಾಟ್‌ ಹಿಡಿದು ಬಂದ ರಿಷಭ್‌ ಪಂತ್‌ ಕೂಡ ಸ್ಫೋಟಕ ಆಟಕ್ಕಿಳಿದರು. ಅವರ 70 ರನ್‌ ಕೇವಲ 65 ಎಸೆತಗಳಲ್ಲಿ ಬಂತು. 4 ಬೌಂಡರಿ ಜತೆಗೆ 4 ಪ್ರಚಂಡ ಸಿಕ್ಸರ್‌ ಬಾರಿಸಿ ಆರ್ಭಟಿಸಿದರು. ಅವರ ನಾಲ್ಕೂ ಸಿಕ್ಸರ್‌ಗಳು ಸ್ಪಿನ್ನರ್‌ಗಳಾದ ಸೋಧಿ ಹಾಗೂ ಕೂಪರ್‌ ಎಸೆತಗಳಲ್ಲಿ ಸಿಡಿದವು. ಅಗರ್ವಾಲ್‌-ಪಂತ್‌ ಕೇವಲ 14.3 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರೈಸಿದರು.

ಪಂತ್‌ ಸಿಡಿದರೂ ಟೆಸ್ಟ್‌ ತಂಡದ ಕೀಪಿಂಗ್‌ ಹೊಣೆಗಾರಿಕೆ ವೃದ್ಧಿಮಾನ್‌ ಸಾಹಾ ಪಾಲಾಗುವು ದರಲ್ಲಿ ಅನುಮಾನವಿಲ್ಲ. ಅವರು 38 ಎಸೆತ ನಿಭಾಯಿಸಿ 30 ರನ್‌ ಮಾಡಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ ಬೌಲರ್ ಘಾತಕ ಪ್ರದರ್ಶನ ನೀಡುವಲ್ಲಿ ವಿಫ‌ಲರಾದರು. ಕ್ಯುಗೆಲೀನ್‌, ಟಿಕ್ನರ್‌ ಇಬ್ಬರೂ ವಿಕೆಟ್‌ ಲೆಸ್‌ ಎನಿಸಿದರು. ಉರುಳಿದ 3 ವಿಕೆಟ್‌ ನಾಯಕ ಡ್ಯಾರಿಲ್‌ ಮಿಚೆಲ್‌ ಪಾಲಾಯಿತು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 263
ನ್ಯೂಜಿಲ್ಯಾಂಡ್‌ ಇಲೆವೆನ್‌
ಪ್ರಥಮ ಇನ್ನಿಂಗ್ಸ್‌ 235
ಭಾರತ ದ್ವಿತೀಯ ಇನ್ನಿಂಗ್ಸ್‌
ಪೃಥ್ವಿ ಶಾ ಬಿ ಮಿಚೆಲ್‌ 39
ಮಾಯಾಂಕ್‌ ಅಗರ್ವಾಲ್‌ ನಿವೃತ್ತಿ 81
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಮಿಚೆಲ್‌ 8
ರಿಷಭ್‌ ಪಂತ್‌ ಸಿ ಕ್ಲೀವರ್‌ ಬಿ ಮಿಚೆಲ್‌ 70
ವೃದ್ಧಿಮಾನ್‌ ಸಾಹಾ ಔಟಾಗದೆ 30
ಆರ್‌. ಅಶ್ವಿ‌ನ್‌ ಔಟಾಗದೆ 16
ಇತರ 8
ಒಟ್ಟು (4 ವಿಕೆಟಿಗೆ) 252
ವಿಕೆಟ್‌ ಪತನ: 1-72, 2-82, 3-216.
ಬೌಲಿಂಗ್‌:
ಬ್ಲೇರ್‌ ಟಿಕ್ನರ್‌ 3-0-19-0
ಸ್ಕಾಟ್‌ ಕ್ಯುಗೆಲೀನ್‌ 12-0-81-0
ಸ್ಕಾಟ್‌ ಜಾನ್ಸನ್‌ 4-0-18-0
ಡ್ಯಾರಿಲ್‌ ಮಿಚೆಲ್‌ 9-2-33-3
ಜೇಮ್ಸ್‌ ನೀಶಮ್‌ 6-1-29-0
ಐಶ್‌ ಸೋಧಿ 5-0-32-0
ಹೆನ್ರಿ ಕೂಪರ್‌ 3-0-27-0
ಟಾಮ್‌ ಬ್ರೂಸ್‌ 5-1-8-0
ಫಿನ್‌ ಅಲೆನ್‌ 1-1-0-0

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೊರೊನಾ ಹರಡಲು 5 ಜಿ ಕಾರಣ ?

ಕೊರೊನಾ ಹರಡಲು 5 ಜಿ ಕಾರಣ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ಫ್ಯೂ ಉಲ್ಲಂಘಿಸಿದ ಫುಟ್ ಬಾಲ್ ಆಟಗಾರನಿಗೆ ಮೂರು ತಿಂಗಳು ಗೃಹ ಬಂಧನ

ಕರ್ಫ್ಯೂ ಉಲ್ಲಂಘಿಸಿದ ಫುಟ್ ಬಾಲ್ ಆಟಗಾರನಿಗೆ ಮೂರು ತಿಂಗಳು ಗೃಹ ಬಂಧನ

ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ

ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಮನೆಯೇ ಚಿತ್ರಾಲಯ

ಮನೆಯೇ ಚಿತ್ರಾಲಯ

isiri-tdy-4

ಬಂತು ನೋಡಿ ವಾಟ್ಸ್ ಆ್ಯಪ್ ಬ್ಯಾಂಕಿಂಗ್‌

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ