ಇಂಧೋರ್ ನಲ್ಲಿ ಮಯಾಂಕ್ ಮಿಂಚಿನ ಶತಕ

Team Udayavani, Nov 15, 2019, 12:32 PM IST

ಇಂಧೋರ್:  ಪ್ರಚಂಡ ಫಾರ್ಮ್ ನಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಶತಕ ಸಿಡಿಸಿದ್ದಾರೆ. ಪ್ರವಾಸಿ ಬಾಂಗ್ಲಾ ವಿರುದ್ದದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ತಮ್ಮ ಬ್ಯಾಟಿಂಗ್ ಮಿಂಚು ಹರಿಸಿದ್ದಾರೆ.

ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಬಾಂಗ್ಲಾ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಯಾಂಕ್ ತನ್ನ ಶತಕದ ಸಂಖ್ಯೆಯನ್ನು ಮೂರಕ್ಕೇರಿಸಿದರು.

183 ಎಸೆತಗಳಲ್ಲಿ ಶತಕ ಬಾರಿಸಿದ ಮಯಾಂಕ್ 15 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.

ಎರಡನೇ ವಿಕೆಟ್ ಗೆ ಪೂಜಾರ ಜೊತೆ 91 ರನ್ ಜೊತೆಯಾಟವಾಡಿದ ಮಯಾಂಕ್ , ನಾಲ್ಕನೇ ವಿಕೆಟ್ ಗೆ ರಹಾನೆ ಜೊತೆಗೆ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಮಯಾಂಕ್ ಶತಕದ ವೇಳೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ರಹಾನೆ 42 ರನ್ ಗಳಿಸಿ ಆಟವಾಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ