Udayavni Special

ಎಂಸಿಜಿಯಲ್ಲಿ ಕಾದಿದೆ ಸ್ಪೋರ್ಟೀವ್‌ ಪಿಚ್‌


Team Udayavani, Dec 25, 2018, 6:00 AM IST

curator-matthew-page.jpg

ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ ಸಾಂಪ್ರದಾಯಿಕ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವನ್ನು ಆಯೋಜಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಭಾರತ-ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್‌ ಬುಧವಾರದಿಂದ ಇಲ್ಲಿ ಆರಂಭವಾಗಲಿದ್ದು, ಇತ್ತಂಡಗಳನ್ನು “ಸ್ಪೋರ್ಟೀವ್‌ ಟ್ರ್ಯಾಕ್‌’ ಎದುರಾಗಲಿದೆ ಎಂದು ಮೈದಾನದ ಕ್ಯುರೇಟರ್‌ ಮ್ಯಾಥ್ಯೂ ಪೇಜ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಆಸ್ಟ್ರೇಲಿಯದ ಪಿಚ್‌ಗಳೆಲ್ಲ ಬೌನ್ಸಿ ಹಾಗೂ ವೇಗದಿಂದ ಕೂಡಿರುತ್ತದೆ. ಆದರೆ ಮೆಲ್ಬರ್ನ್ ಪಿಚ್‌ ಇದಕ್ಕೆ ಅಪವಾದ. ಇದು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಕಳೆದ ಆ್ಯಶಸ್‌ ಸರಣಿಯ ವೇಳೆ ಮೆಲ್ಬರ್ನ್ ಅಂಗಳದಲ್ಲಿ ಧಾರಾಳ ರನ್‌ ಹರಿದು ಬಂದಿತ್ತು. ಬಳಿಕ ಇದು ಐಸಿಸಿಯಿಂದ “ಕಳಪೆ ಪಿಚ್‌’ ಎಂಬ ಟೀಕೆಗೂ ಗುರಿಯಾಗಿತ್ತು.

ಅಂದಿನಿಂದ ಮೆಲ್ಬರ್ನ್ ಮೈದಾನದ ಕ್ಯುರೇಟರ್‌ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬ್ಯಾಟಿಂಗ್‌ ಹಾಗೂ ಬೌಲರ್‌ಗಳಿಬ್ಬರಿಗೂ ನೆರವಾಗುವ ಸ್ಪರ್ಧಾತ್ಮಕ ಪಿಚ್‌ ರೂಪುಗೊಳ್ಳಲಿದೆ ಎಂದಿದ್ದಾರೆ.

ಸ್ಪರ್ಧಾತ್ಮಕ ಪಿಚ್‌
“ಕಳೆದ ಆ್ಯಶಸ್‌ ಸರಣಿಯ ಟೆಸ್ಟ್‌ ವೇಳೆ ರನ್‌ ಹರಿದು ಬಂದದ್ದು ನಿಜ. ಆದರೆ ಅಂತಿಮ ದಿನದಾಟಕ್ಕೆ ಮಳೆ ಎದುರಾದುದರಿಂದ ಪಂದ್ಯ ಡ್ರಾಗೊಳ್ಳಬೇಕಾಯಿತು. ಈ ಬಾರಿ ಬ್ಯಾಟಿಂಗ್‌-ಬೌಲಿಂಗ್‌ ಎರಡಕ್ಕೂ ನೆರವಾಗುವ ರೀತಿಯಲ್ಲಿ ಪಿಚ್‌ ತಯಾರಾಗುತ್ತಿದೆ. ಪಂದ್ಯ ಹೆಚ್ಚು ಸ್ಪರ್ಧಾತ್ಮಕವಾಗಿರಲಿದೆ’ ಎಂದು ಮ್ಯಾಥ್ಯೂ ಪೇಜ್‌ ಹೇಳಿದರು.

ಕಳೆದ ವರ್ಷದ ಪಿಚ್‌ ರೇಟಿಂಗ್‌ ಕುರಿತು ಐಸಿಸಿ ನಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪೇಜ್‌, “ಹಿಂದಿನ ವರ್ಷದ ಐಸಿಸಿ ಪಿಚ್‌ ರೇಟಿಂಗ್‌ ಹೇಗಿತ್ತು ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ. ಪ್ರತೀ ಸಲವೂ ನೀವು ಗರಿಷ್ಠ ಪ್ರಯತ್ನದೊಂದಿಗೆ ಅತ್ಯುತ್ತಮ ಸಾಮರ್ಥ್ಯಕ್ಕಾಗಿ ಶ್ರಮಪಡಲೇಬೇಕು. ಪ್ರತೀ ಸಲವೂ ಒತ್ತಡ ಇದ್ದೇ ಇರುತ್ತದೆ.’ ಎಂದರು.

ಟಾಪ್ ನ್ಯೂಸ್

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫ್ಯಾಬಿಯನ್‌ ಅಲೆನ್‌ ಔಟ್‌; ವಿಂಡೀಸಿಗೆ ದೊಡ್ಡ ಹೊಡೆತ

ಫ್ಯಾಬಿಯನ್‌ ಅಲೆನ್‌ ಔಟ್‌; ವಿಂಡೀಸಿಗೆ ದೊಡ್ಡ ಹೊಡೆತ

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ ಟಿ20 ತಂಡ ಪ್ರಕಟ

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ ಟಿ20 ತಂಡ ಪ್ರಕಟ

ನಮೀಬಿಯಾ ವಿಜಯ ಸಂಭ್ರಮ

ನಮೀಬಿಯಾ ವಿಜಯ ಸಂಭ್ರಮ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.