ಪಾಕ್‌ನಲ್ಲಿ ವಿಶ್ವದ ಲಂಬೂ ಕ್ರಿಕೆಟಿಗ

Team Udayavani, Nov 8, 2019, 4:51 AM IST

ಲಾಹೋರ್‌: ಸಮಕಾಲೀನ ಕ್ರಿಕೆಟಿನ ಅತೀ ಎತ್ತರದ ಆಟಗಾರನೆಂಬ ದಾಖಲೆ ಪಾಕಿಸ್ಥಾನದ ವೇಗಿ ಮೊಹಮ್ಮದ್‌ ಇರ್ಫಾನ್‌ ಹೆಸರಲ್ಲಿದೆ. ಇವರ ಎತ್ತರ 7 ಅಡಿ, 1 ಇಂಚು. ಆದರೀಗ ಇವರ ದಾಖಲೆಗೆ ಪಾಕಿಸ್ಥಾನಿ ಕ್ರಿಕೆಟಿಗನೇ ಸಂಚಕಾರ ತಂದಿದ್ದಾರೆ. ಆದರೆ ಇವರಿನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿಲ್ಲ. “ಪಾಕಿಸ್ಥಾನ್‌ ಸೂಪರ್‌ ಲೀಗ್‌’ನಲ್ಲಿ ಲಾಹೋರ್‌ ಖಲಂದರ್ ತಂಡವನ್ನು ಪ್ರತಿನಿಧಿಸಲು ಆಹ್ವಾನ ಪಡೆದಿದ್ದಾರೆ. 21ರ ಹರೆಯದ ಸ್ಪಿನ್ನರ್‌ನ ಹೆಸರು ಮುಹಮ್ಮದ್‌ ಮುದಸ್ಸರ್‌. ಎತ್ತರ 7 ಅಡಿ, 5 ಇಂಚು!

ಲಾಹೋರ್‌ನವರಾದ ಮುದಸ್ಸರ್‌ ಬುಧವಾರದಿಂದ ಮೊದಲ್ಗೊಂ ಡ “ಲಾಹೋರ್‌ ಖಲಂದರ್ ಹೈ ಪರ್ಫಾರ್ಮೆನ್ಸ್‌ ಸೆಂಟರ್‌’ನಲ್ಲಿ ಒಂದು ವರ್ಷ ಕಾಲ ತರಬೇತಿ ಪಡೆಯಲಿದ್ದು, ಮುಂದಿನ ಋತುವಿನಿಂದ ಪಿಎಸ್‌ಎಲ್‌ನಲ್ಲಿ ಆಡ ಲಿದ್ದಾರೆ.
“ಪಾಕಿಸ್ಥಾನ ರಾಷ್ಟ್ರೀಯ ತಂಡದ ಪರ ಆಡುವುದು ನನ್ನ ಕನಸು. ಸದ್ಯಕ್ಕೆ ಫಿಟ್‌ನೆಸ್‌ ಓಕೆ. ಆದರೆ ನನ್ನ ಕಾಲಿಗೆ ಶೂ ಸಿಗುವುದೇ ಸಮಸ್ಯೆಯಾಗಿದೆ’ ಎಂಬುದು ಮುದಸ್ಸರ್‌ ಅಳಲು!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ