ಮುಂದಿನ ಕನಸು ಭಾರತ ರತ್ನ: ಕೋಮ್‌

Team Udayavani, Jan 27, 2020, 6:50 AM IST

ಹೊಸದಿಲ್ಲಿ: ಪದ್ಮವಿಭೂಷಣ ಗೌರವಕ್ಕೆ ಭಾಜನರಾದ ಮೊದಲ ಮಹಿಳಾ ಕ್ರೀಡಾಪಟು ಎಂಬುದು ಬಾಕ್ಸರ್‌ ಮೇರಿ ಕೋಮ್‌ ಅವರ ಹೆಗ್ಗಳಿಕೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ತನ್ನ ಮುಂದಿನ ಕನಸು ಭಾರತ ರತ್ನ ಪಡೆಯುವುದಾಗಿದೆ ಎಂದಿದ್ದಾರೆ. ಬಾಕ್ಸಿಂಗ್‌ ಕ್ಷೇತ್ರದಲ್ಲಿ ಮಾಡಿದ ಅತ್ಯುನ್ನತ ಸಾಧನೆಯನ್ನು ಪರಿಗಣಿಸಿ ಮೇರಿ ಕೋಮ್‌ಗೆ ಪದ್ಮವಿಭೂಷಣ ನೀಡಲಾಗಿದೆ.
“ಭಾರತ ರತ್ನಕ್ಕೆ ಭಾಜನವಾಗುವುದು ನನ್ನ ಕನಸಾಗಿದೆ. ಒಂದಲ್ಲ ಒಂದು ದಿನ ಈ ಪ್ರಶಸ್ತಿ ಪಡೆಯುತ್ತೇನೆ ಎಂಬ ನಂಬಿಕೆ ನನಗಿದೆ. ಇದೀಗ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಲಭಿಸಿರುವುದು ಸಂತಸ ತಂದಿದೆ’ ಎಂದು 6 ಬಾರಿಯ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ಹೇಳಿದ್ದಾರೆ.
ಕಠಿನ ಅಭ್ಯಾಸ
“ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರವುದೇ ನನ್ನ ಸದ್ಯದ ಗುರಿ. ಅದಕ್ಕಾಗಿ ಕಠಿನ ಅಭ್ಯಾಸದಲ್ಲಿ ತೊಡಗಿದ್ದೇನೆ’ ಎಂದು ಮೇರಿ ಕೋಮ್‌ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ