ಮಯಾಮಿ ಓಪನ್: ಫೆಡರರ್ಗೆ 4ನೇ ಪ್ರಶಸ್ತಿ
ಜಾನ್ ಇಸ್ನರ್ ವಿರುದ್ಧ 6-1, 6-4 ಜಯ
Team Udayavani, Apr 2, 2019, 6:00 AM IST
ಮಯಾಮಿ: ಸ್ವಿಜರ್ಲ್ಯಾಂಡಿನ ಟೆನಿಸ್ ತಾರೆ ರೋಜರ್ ಫೆಡರರ್ 4ನೇ ಬಾರಿಗೆ “ಮಯಾಮಿ ಓಪನ್’ ಪ್ರಶಸ್ತಿ ಜಯಿಸಿದ್ದಾರೆ.
ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಫೆಡರರ್ ಹಾಲಿ ಚಾಂಪಿಯನ್ ಜಾನ್ ಇಸ್ನರ್ ವಿರುದ್ದ ಕೇವಲ 63 ನಿಮಿಷಗಳಲ್ಲಿ 6-1, 6-4 ನೇರ ಸೆಟ್ಗಳ ಗೆಲುವು ದಾಖಲಿಸಿದರು. ಇದು ಫೆಡರರ್ ವೃತ್ತಿಜೀವನ 101 ಪ್ರಶಸ್ತಿಯಾಗಿದೆ.
ಪಂದ್ಯದ ಆರಂಭದಲ್ಲೇ ಅನುಭವಕ್ಕೆ ತಕ್ಕ ಆಟವಾಡಿದ ಫೆಡರರ್ಗೆ ಇಸ್ನರ್ ಅವರಿಂದ ಹೆಚ್ಚಿನ ಪೈಪೋಟಿ ಎದುರಾಗಲಿಲ್ಲ. ಮೊದಲ ಸೆಟ್ ಸುಲಭವಾಗಿ ಜಯಿಸಿದ ಫೆಡರರ್ ದ್ವಿತೀಯ ಸೆಟ್ನಲ್ಲೂ ಇದೇ ಲಯ ಮುಂದುವರಿಸಿದರು. ಇಸ್ನರ್ ತಕ್ಕ ಉತ್ತರ ನೀಡುತ್ತಿದ್ದರೂ ಆಟದ ನಡುವೆ ಕಾಲು ನೋವಿಗೆ ತುತ್ತಾದರು. ಸ್ವಲ್ಪ ಹೊತ್ತು ವೈದ್ಯಕೀಯ ವಿರಾಮ ತೆಗೆದುಕೊಂಡು ಬಂದ ಇಸ್ನರ್ ನೋವಿನಲ್ಲೇ ಆಟವಾಡಿ ಪಂದ್ಯವನ್ನು ಸೋಲಿನೊಂದಿಗೆ ಕೊನೆಗೊಳಿಸಿದರು.
50ನೇ ಎಟಿಪಿ ಮಾಸ್ಟರ್ ಫೈನಲ್
2015ರ ಪ್ಯಾರಿಸ್ ಮಾಸ್ಟರ್ ಕೂಟದಲ್ಲಿ ಫೆಡರರ್ ವಿರುದ್ಧ ಗೆಲುವು ದಾಖಲಿಸಿದ್ದ ಇಸ್ನರ್ಗೆ ಈ ಕೂಟದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಇದು ಫೆಡರರ್ ಅವರ 154ನೇ ಟೂರ್ ಫೈನಲ್ ಆಗಿದ್ದು, 50ನೇ ಎಟಿಪಿ ಮಾಸ್ಟರ್ ಫೈನಲ್ ಆಗಿದೆ. ಇದು ಫೆಡರರ್ ಗೆದ್ದ 28ನೇ ಮಾಸ್ಟರ್ ಪ್ರಶಸ್ತಿಯಾಗಿದೆ.
“ಇದೊಂದು ಅದ್ಭುತ ಕ್ಷಣ. ಸದ್ಯ ನಾನು ಸಂತೋಷದಿಂದಿದ್ದೇನೆ. 1999ರಲ್ಲಿ ಮೊದಲ ಬಾರಿಗೆ ಈ ಕೂಟದಲ್ಲಿ ಆಡಿದೆ. 2019ರಲ್ಲೂ ಇಲ್ಲಿ ಆಡುತ್ತಿದ್ದೇನೆ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಫೆಡರರ್ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಮಾಂಟೆ ಕಾರ್ಲೊ ಮಾಸ್ಟರ್ ಕೂಟದಲ್ಲಿ ಫೆಡರರ್ ಭಾಗವಹಿಸುತ್ತಿಲ್ಲ. ಮೇ ತಿಂಗಳ ಆರಂಭದಲ್ಲಿ ನಡೆಯಲಿರುವ ಮ್ಯಾಡ್ರಿಡ್ನಲ್ಲಿ ಸ್ಪರ್ಧಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ