ಮಯಾಮಿ ಓಪನ್: ಫೆಡರರ್- ಶಪೊವಲೋವ್ ಸೆಮಿ ಫೈಟ್
Team Udayavani, Mar 30, 2019, 6:08 AM IST
ಮಯಾಮಿ: “ಮಯಾಮಿ ಓಪನ್’ ಕೂಟದಲ್ಲಿ ಗೆಲುವಿನ ಆಟ ಮುಂದುವರಿಸಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ವನಿತಾ ವಿಭಾಗದಲ್ಲಿ ಜೆಕ್ ಗಣರಾಜ್ಯದ ಕ್ಯಾರೋಲಿನ್ ಪ್ಲಿಸ್ಕೋವಾ ಫೈನಲ್ಗೆ ಲಗ್ಗೆಯಿರಿಸಿದ್ದಾರೆ.
ಕ್ವಾರ್ಟರ್ ಫೈನಲ್ನಲ್ಲಿ ಫೆಡರರ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು 6-0, 6-4 ನೇರ ಸೆಟ್ಗಳಿಂದ ಸೋಲಿಸಿದರು. ಫೆಡರರ್ಗೆ ಮುಂದಿನ ಎದುರಾಳಿ ಕೆನಡಾದ ಡೆನ್ನಿಸ್ ಶಪೊವಲೋವ್. 20ನೇ ಶ್ರೇಯಾಂಕದ ಶಪೊವಲೋವ್ ಅಮೆರಿಕದ ಫ್ರಾನ್ಸೆಸ್ ಟಿಯೋಫ್ ವಿರುದ್ಧ 6-7 (6-5), 6-4, 6-2ರಿಂದ ಜಯ ಸಾಧಿಸಿದರು.
ಶುಕ್ರವಾರ ತಡ ರಾತ್ರಿ ಹಾಲಿ ಚಾಂಪಿಯನ್ ಜಾನ್ ಇಸ್ನರ್-ಕೆನಡಾದ ಯುವ ಟೆನಿಸಿಗ ಫೆಲಿಕ್ಸ್ ಔಗುರ್ ಅಲಿಯಾಸಿಮ್ ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ.
ಹಾಲೆಪಗೆ ಸೋಲು
ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದ್ದ ರೊಮೇನಿಯದ ಸಿಮೋನಾ ಹಾಲೆಪ್ ಆಘಾತ ಅನುಭವಿಸಿದ್ದಾರೆ. ಸೆಮಿಫೈನಲ್ನಲ್ಲಿ ಹಾಲೆಪ್ ಜೆಕ್ ಗಣರಾಜ್ಯದ ಕ್ಯಾರೋಲಿನ್ ಪ್ಲಿಸ್ಕೋವಾ ವಿರುದ್ಧ 5-7, 1-6ರಿಂದ ಮುಗ್ಗರಿಸಿದರು. ಹಾಲೆಪ್ ಫೈನಲ್ ಪ್ರವೇಶಿಸಿದ್ದರೆ ಮತ್ತೆ ನಂ.1 ರ್ಯಾಂಕಿಂಗ್ ಪಡೆಯಬಹುದಿತ್ತು. ಪ್ಲಿಸ್ಕೋವಾ ಫೈನಲ್ನಲ್ಲಿ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಅವರನ್ನು ಎದುರಲಿಸದ್ದಾರೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾರ್ಟಿ ಎಸ್ತೋನಿಯಾದ ಅನೆಟ್ ಕೊಂಟವೀಟ್ ವಿರುದ್ಧ 6-3, 6-3 ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ