ಕತ್ರಿನಾ ಕೈಫ್ ಗೆ ಫೆಲ್ಪ್ಸ್ ಫಿಟ್ನೆಸ್ ಟಿಪ್ಸ್
Team Udayavani, Mar 29, 2019, 6:00 AM IST
ಮುಂಬಯಿ: ಬಾಲಿವುಡ್ನ ಜನಪ್ರಿಯ ನಟಿ ಕತ್ರಿನಾ ಕೈಫ್ಗೆ ಅಮೆರಿಕದ ಖ್ಯಾತ ಈಜು ತಾರೆ ಮೈಕಲ್ ಫೆಲ್ಪ್ಸ್ ಫಿಟ್ನೆಸ್ ಟಿಪ್ಸ್ ನೀಡಿದ್ದಾರೆ.
ಒಲಿಂಪಿಕ್ಸ್ನಲ್ಲಿ 22 ಚಿನ್ನದ ಪದಕ ಗೆದ್ದಿರುವ ಫೆಲ್ಪ್ಸ್ ಇದೀಗ ಭಾರತಕ್ಕೆ ಆಗಮಿಸಿ ಕ್ರಿಕೆಟ್ ತಾರೆಯರು, ಬಾಲಿವುಡ್ ತಾರೆಯರ ಜತೆ ಮಾತುಕತೆ ನಡೆಸಿದ್ದಾರೆ. ಜತೆಗೆ ಅಗತ್ಯವಾದ ಫಿಟೆ°ಸ್ ಮಂತ್ರ ಹೇಳಿಕೊಟ್ಟಿದ್ದಾರೆ. ನಟಿ ಕತ್ರಿನಾಗೆ ಫೆಲ್ಪ್ಸ್ ಫಿಟೆ°ಸ್ ಟಿಪ್ಸ್ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ.
“ಕೆಲವು ಸಲ ನಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹೀಗಾಗಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಬಲವಂತದಿಂದ ಮೈ ದಂಡಿಸಿ ವ್ಯಾಯಾಮ ನಡೆಸಬೇಕಾಗು ತ್ತದೆ. ಫೆಲ್ಪ್$Õ ನೀಡಿರುವ ಸಲಹೆ ಸೂಚನೆಗಳಿಂದ ಬಹಳ ಸಂತೋಷವಾಗಿದೆ’ ಎಂದು ಕತ್ರಿನಾ ತಿಳಿಸಿದ್ದಾರೆ.