ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸುವ ತಾಕತ್ತಿರುವುದು ಭಾರತಕ್ಕೆ ಮಾತ್ರ: ವಾನ್

ಮುಂದಿನ ವರ್ಷ ಟೀಂ ಇಂಡಿಯಾ ಕೈಗೊಳ್ಳಲಿದೆ ಆಸ್ಟ್ರೇಲಿಯಾ ಪ್ರವಾಸ

Team Udayavani, Dec 2, 2019, 9:19 PM IST

ಇಂಗ್ಲಂಡ್ ತಂಡದ ಮಾಜೀ ಕಪ್ತಾನ ಮೈಕಲ್ ವಾನ್ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿರುವುದು ಭಾರತ ತಂಡ ಮಾತ್ರ. ಆಸೀಸ್ ತಂಡ ಪಾಕಿಸ್ಥಾನದ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಮೈಕಲ್ ವಾನ್ ಅವರು ಮಾಡಿರುವ ಟ್ವೀಟ್ ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಡೇವಿಡ್ ವಾರ್ನರ್ ಅವರ ಭರ್ಜರಿ ತ್ರಿಶತಕದ ಮೂಲಕ ಆಸ್ಟ್ರೇಲಿಯಾ ಪ್ರವಾಸಿ ಪಾಕಿಸ್ಥಾನವನ್ನು ಎರಡನೇ ಟೆಸ್ಟ್ ನಲ್ಲೂ ಇನ್ನಿಂಗ್ಸ್ ಮತ್ತು 48 ರನ್ ಗಳಿಂದ ಸೋಲಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು.

ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ನಿಕಟ ಪೈಪೋಟಿ ನೀಡುವತ್ತ ಆಸೀಸ್ ಮುನ್ನಡೆಯುತ್ತಿದೆ. ಭಾರತ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ 176 ಪಾಯಿಂಟ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಇಂಗ್ಲಂಡ್ ನೆಲದಲ್ಲಿ ನಡೆದಿದ್ದ ಆ್ಯಶಸ್ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಆ ಬಳಿಕ ತನ್ನದೇ ನೆಲದಲ್ಲಿ ಪಾಕಿಸ್ಥಾನವನ್ನು ಎರಡೂ ಟೆಸ್ಟ್ ಗಳಲ್ಲಿ ಇನ್ನಿಂಗ್ಸ್ ಅಂತರದಿಂದ ಪರಾಭವಗೊಳಿಸಿ ತನ್ನ ಸಾಮರ್ಥ್ಯವನ್ನು ಜಾಹೀರುಗೊಳಿಸಿತ್ತು.

ಅಸ್ಟ್ರೇಲಿಯಾ ಇನ್ನು ಮುಂದೆ ನ್ಯೂಝಿಲ್ಯಾಂಡ್ ತಂಡದ ಎದುರು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತ ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ