ಪಂದ್ಯ ಜಯಿಸಿಕೊಟ್ಟ ಮಿಥಾಲಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ

Team Udayavani, Jun 4, 2018, 2:18 PM IST

ಕೌಲಾಲಂಪುರ:ಕೌಲಾಲಂಪುರದಲ್ಲಿ ಭಾನುವಾರ ನಡೆದ ಮಹಿಳಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯಾಟದಲ್ಲಿ ಮಲೇಷ್ಯಾ ವಿರುದ್ಧ ಅಬ್ಬರಿಸಿ ಭರ್ಜರಿ ಬ್ಯಾಟಿಂಗ್(97 ರನ್) ನಡೆಸಿ ಭಾರೀ ಅಂತರದಿಂದ ಗೆಲ್ಲಿಸಿಕೊಟ್ಟ ಕೀರ್ತಿ ಮಿಥಾಲಿ ರಾಜ್ ಅವರದ್ದು. ಆದರೆ ಆಕೆಗೆ ಸಿಕ್ಕಿದ ಬಹುಮಾನದ ಮೊತ್ತ ಎಷ್ಟು ಎಂದು ಕೇಳಿದರೆ  ನಿಮ್ಮ ಹುಬ್ಬೇರುವಂತೆ ಮಾಡುತ್ತೆ!

ಅದ್ಭುತ ಬ್ಯಾಟಿಂಗ್ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದ ಮಿಥಾಲಿ ರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ, ವಿವಾದಕ್ಕೀಡಾಗಿದ್ದು ಆಕೆಗೆ ಕೊಟ್ಟ ಬಹುಮಾನದ ಮೊತ್ತ!

ತಂಡವನ್ನು ಜಯಿಸಿಕೊಟ್ಟ ಮಿಥಾಲಿ ರಾಜ್ ಗೆ ಸಿಕ್ಕ ಬಹುಮಾನದ ಮೊತ್ತ 250 ಅಮೆರಿಕನ್ ಡಾಲರ್..ಅಂದರೆ ಕೇವಲ 16 ಸಾವಿರ ರೂಪಾಯಿ ಮಾತ್ರ. ಪಂದ್ಯ ಶ್ರೇಷ್ಠ ಪುರುಷ ಕ್ರಿಕೆಟಿಗರಿಗೆ 2000 ಅಮೆರಿಕನ್(ಒಂದು ಲಕ್ಷ ರೂಪಾಯಿ) ಡಾಲರ್ ಬಹುಮಾನ ಕೊಡುತ್ತಾರೆ.

ಮಿಥಾಲಿ ರಾಜ್ ಗೆ ನೀಡಿದ್ದ ಬಹುಮಾನ ಮೊತ್ತದ ಚೆಕ್ ನ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ ಬಳಿಕ ಕ್ರೀಡೆಯಲ್ಲಿ ಮಹಿಳಾ ಮತ್ತು ಪುರುಷ ಆಟಗಾರರಿಗೆ ನೀಡುವ ಬಹುಮಾನ ಮೊತ್ತದ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ