ಮತ್ತೆ ಬೆಂಚ್ ಕಾಯ್ದ ಮಿಥಾಲಿ: ಬಗೆಹರಿಯದ ಡ್ರೆಸ್ಸಿಂಗ್ ರೂಮ್ ಕಲಹ ?
Team Udayavani, Feb 6, 2019, 4:31 AM IST
ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮಹಿಳಾ ಟಿ- ಟ್ವೆಂಟಿ ಸರಣಿ ಬುಧವಾರ ಆರಂಭವಾಗಿದೆ. ಮೊದಲ ಪಂದ್ಯ ಆಡಲಿಳಿದ ಭಾರತೀಯ ಮಹಿಳಾ ತಂಡದಲ್ಲಿ ಅನುಭವಿ ಮಿಥಾಲಿ ರಾಜ್ ಜಾಗ ಪಡೆಯದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಮಹಿಳಾ ವಿಶ್ವ ಟಿ-20 ಯ ಸೆಮಿ ಫೈನಲ್ ಪಂದ್ಯಕ್ಕೆ ಮಿಥಾಲಿ ರಾಜ್ ರನ್ನು ಹೊರಗಿಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯ ಸೋತ ನಂತರ ನಾಯಕಿ ಹರ್ಮನ್ ಕೌರ್ ಮತ್ತು ಕೋಚ್ ರಮೇಶ್ ಪೊವಾರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.
ನಂತರದ ಬೆಳವಣಿಗೆಯಲ್ಲಿ ಕೋಚ್ ಸ್ಥಾನಕ್ಕೆ ರಮೇಶ್ ಪೊವಾರ್ ಬದಲಿಗೆ ವಿವಿ ರಾಮನ್ ಕರೆ ತರಲಾಗಿತ್ತು. ಆದರೆ ಬಲಿಷ್ಠ ಕಿವೀಸ್ ವಿರುದ್ಧದ ಈ ಪಂದ್ಯಕ್ಕೆ ಮಿಥಾಲಿ ಕೈ ಬಿಟ್ಟಿರುವುದು ಅನೇಕ ಅನುಮಾನಗಳನ್ನು ಮೂಡಿಸುತ್ತಿದೆ. ಮಹಿಳಾ ಕ್ರಿಕೆಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಮತ್ತೆ ಕೇಳಿ ಬರುತ್ತಿದೆ.
ತಂಡದಲ್ಲಿ ಮಿಥಾಲಿ ಬದಲಿಗೆ ಪ್ರಿಯಾ ಪೂನಿಯಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 22 ರ ಹರೆಯದ ಪ್ರಿಯಾ ಪೂನಿಯಾ ಗೆ ಇದು ಮೊದಲ ಅಂತಾರಾಷ್ಟ್ರೀಯ ಟಿ-20 ಪಂದ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ