ಟ್ವೀಟರ್ನಲ್ಲಿ ಕೆಣಕಿದ ಅಭಿಮಾನಿಗೆ ಮಿಥಾಲಿ ತಿರುಗೇಟು
Team Udayavani, Aug 22, 2017, 12:48 PM IST
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ಗೆ ಟ್ವೀಟರ್ನಲ್ಲಿ ಮುಜುಗರ ತರುವಂತಹ ಘಟನೆ ಯೊಂದು ನಡೆದಿದೆ. ಅಭಿಮಾನಿಯೊಬ್ಬ ಮಿಥಾಲಿ ಪ್ರಕಟಿಸಿದ್ದ ಫೋಟೋ ಬಗ್ಗೆ ಕೀಳು ಅಭಿರುಚಿ ವ್ಯಕ್ತಪಡಿಸಿದ್ದಾನೆ. ಈ ಬೆನ್ನಲ್ಲೇ ಅಭಿಮಾನಿಯ ಅಸಭ್ಯ ವರ್ತನೆಗೆ ಮಿಥಾಲಿ ರಾಜ್ ಖಡಕ್ ಉತ್ತರ ನೀಡಿದ್ದಾರೆ.
ಏನಿದು ಘಟನೆ?: ಭಾರತ ತಂಡದ ನಾಯಕಿ ಮಿಥಾಲಿ ಭಾನುವಾರ ಸಹ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಮಾಜಿ ಅಂತಾರಾಷ್ಟ್ರೀಯ ಆಟಗಾರ್ತಿಯರಾದ ನೋಶಿನ್ ಅಲ್ ಖಾದಿರ್ ಹಾಗೂ ಮಮತಾ ಮಾಬೆನ್ ಅವರೊಂದಿಗಿರುವ ಫೋಟೋ ಪ್ರಕಟಿಸಿದ್ದರು. ಈ ಫೋಟೋದ ಕೆಳಗೆ ಇದೊಂದು ಅಮೂಲ್ಯವಾದ ದಿನ, ವಿಶೇಷವಾದ ಮಹಿಳೆಯರೊಂದಿಗಿರುವ ಘಳಿಗೆ ಸ್ಮರಣೀಯ ಎಂದು ಬರೆದು ಕೊಂಡಿದ್ದರು. ಚಿತ್ರದಲ್ಲಿ ಮಿಥಾಲಿ ಎಡ ಕಂಕುಳ ಬಳಿ ಬೆವರಿನಿಂದಾಗಿ ಬಟ್ಟೆ ಸ್ವಲ್ಪ ಒದ್ದೆಯಾಗಿತ್ತು. ಇದಕ್ಕೆ ಅಭಿಮಾನಿಯೊಬ್ಬ ಕ್ಷಮಿಸಿ ನಾಯಕಿ, ನೋಡಲು ಕೆಟ್ಟ ದಾಗಿದೆ. ನಿಮ್ಮ ಕಂಕುಳ ಬಳಿ ಬೆವರಿನಿಂದ ಒದ್ದೆಯಾಗಿದೆ ಎಂದಿದ್ದಾನೆ. ಈ ಟ್ವೀಟ್ಗೆ ಮಿಥಾಲಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಬೆವರು ಹರಿಸಿರುವುದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ನಾನು ಹೋಗಿದ್ದು ಕ್ರಿಕೆಟ್ ಅಕಾಡೆಮಿ ಉದ್ಘಾಟನೆಗೆ ಇದರಲ್ಲಿ ನನಗೆ ಅವಮಾನವಾಗುವಂತಹದು ಏನೂ ಇಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಪುರುಷ ಕ್ರಿಕೆಟ್ನಲ್ಲಿ ಯಾರು ಇಷ್ಟ ಎಂದು ಪತ್ರಕರ್ತರೊಬ್ಬರು ಕೇಳಿದ್ದಕ್ಕೆ ಇದೇ ಪ್ರಶ್ನೆಯನ್ನು ಸ್ವಲ್ಪ ಉಲ್ಟಾ ಮಾಡಿ ಪುರುಷ ಕ್ರಿಕೆಟಿಗರಲ್ಲಿ ಕೇಳಿ ಎಂದು ಮಿಥಾಲಿ ಬೆವರಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ