ಸೆರೆನಾ ಮಗಳ ಜತೆ ಮಿಶ್ರ ಡಬಲ್ಸ್: ಪೇಸ್ ಹಾಸ್ಯ
Team Udayavani, May 7, 2018, 7:10 AM IST
ನವದೆಹಲಿ: ದಿಗ್ಗಜ ಲಿಯಾಂಡರ್ ಪೇಸ್ ನಿವೃತ್ತಿ ಬಗ್ಗೆ ಚರ್ಚೆಯಾಗುತ್ತಲೇ ಇದೆ. 45 ವರ್ಷದಲ್ಲೂ ಲಿಯಾಂಡರ್ ಫಾರ್ಮ್ ಕಳೆಗುಂದಿಲ್ಲ.
ಎದುರಾಳಿಗಳಿಗೆ ಪ್ರಶಸ್ತಿ ಗೆಲ್ಲುವ ಮೂಲಕವೇ ಪೇಸ್ ತಕ್ಕ ಉತ್ತರ ನೀಡುತ್ತಿದ್ದಾರೆ.ತಾನು ಸದ್ಯಕ್ಕೆ ನಿವೃತ್ತಿ ನೀಡುವುದಿಲ್ಲ ಎನ್ನುವುದನ್ನು ಸ್ವತಃ ಪೇಸ್ ಈಗ ಪರೋಕ್ಷವಾಗಿ ತಿಳಿಸಿದ್ದಾರೆ.ಅವರು ಅಮೆರಿಕದ ಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ಗೆ ಟ್ವೀಟ್ ಮಾಡಿ, ನಿಮ್ಮ ಮಗಳು ಮಿಶ್ರ ಡಬಲ್ಸ್ ಆಡುವುದಿದ್ದರೆ 2040ರಲ್ಲಿ ಅವಳ ಜತೆಗೂಡಿ ವಿಂಬಲ್ಡನ್ ಮಿಶ್ರ ಡಬಲ್ಸ್ ಆಡಬೇಕೆಂದಿದ್ದೇನೆ ಎಂದಿದ್ದಾರೆ. ಇದು ಹಾಸ್ಯಕ್ಕೂ ಆಯಿತು. ಜತೆಗೆ ಪೇಸ್ ಇದರಿಂದ ಎಲ್ಲ ಟೀಕಾಕಾರರಿಗೆ ಉತ್ತರ ನೀಡಿದಂತಾಯಿತು ಎನ್ನುವುದು ವಿಶೇಷ.