ಮೊಹಮ್ಮದ್ ಕೈಫ್ ಡೆಲ್ಲಿ ಸಹಾಯಕ ಕೋಚ್
Team Udayavani, Nov 10, 2018, 6:00 AM IST
ಹೊಸದಿಲ್ಲಿ: ಭಾರತದ ಮಾಜಿ ಬ್ಯಾಟ್ಸಮನ್ ಮೊಹಮ್ಮದ್ ಕೈಫ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಕೈಫ್ ಈಗ ರಿಕಿ ಪಾಂಟಿಂಗ್, ಜೇಮ್ಸ್ ಹೋಪ್ಸ್ ಅವರನ್ನೊಳಗೊಂಡ ಕೋಚಿಂಗ್ ತಂಡವನ್ನು ಸೇರಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕೈಫ್ ಗುಜರಾತ್ ಲಯನ್ಸ್ ತಂಡದಲ್ಲಿ ಬ್ರಾಡ್ ಹಾಜ್ ಅವರಿಗೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಛತ್ತೀಸ್ಗಢ್ ತಂಡದ ಚೊಚ್ಚಲ ರಣಜಿ ಟ್ರೋಫಿ ಋತುವಿನಲ್ಲಿ ಕೈಫ್ ಮಾರ್ಗದರ್ಶಕರಾಗಿ ತಂಡವನ್ನು ಮುನ್ನಡೆಸಿದ್ದರು.
“ಡೆಲ್ಲಿ ಡೇರ್ಡೆವಿಲ್ಸ್ ತಂಡದ ಒಂದು ಭಾಗವಾಗುವುದಕ್ಕೆ ಖುಷಿ ಇದೆ. ಯುವ ಆಟಗಾರರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ನಿರ್ವಹಣ ತಂಡದ ಬೆಂಬಲದೊಂದಿಗೆ ಯುವ ಆಟಗಾರರನ್ನು ಉತ್ತಮ ಆಟಗಾರರನ್ನಾಗಿ ಮಾಡುವಲ್ಲಿ ಪ್ರಯತ್ನಿಸುತ್ತೇನೆ’ ಎಂದು ಕೈಫ್ ತಿಳಿಸಿದ್ದಾರೆ.
“ಕೈಫ್ ಅವರ ಅನುಭವ ನಮ್ಮ ತಂಡಕ್ಕೆ ನೆರವಾಗಲಿದೆ. ಈ ಆವೃತ್ತಿಯಲ್ಲಿ ಅವರ ಮಾರ್ಗದರ್ಶನ ತಂಡಕ್ಕೆ ಪೂರಕವಾಗಲಿದೆ ಎಂಬ ನಂಬಿಕೆಯಿದೆ’ ಎಂದು ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಿರ್ದೇಶಕ ಮುಸ್ತಾಫಾ ಘೌಸ್ ಹೇಳಿದ್ದಾರೆ.