ಅಫ್ಘಾನ್ ಕೋಚ್ ರೇಸ್ನಲ್ಲಿ ಮೊಹಮ್ಮದ್ ಕೈಫ್
Team Udayavani, Sep 28, 2017, 6:35 AM IST
ಮುಂಬೈ: ಭಾರತ ತಂಡದ ಕ್ರಿಕೆಟಿಗ ಮೊಹಮ್ಮದ್ ಕೈಫ್ ಆಫ್ಘಾನಿಸ್ತಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರೇಸ್ನಲ್ಲಿದ್ದಾರೆ.
ಇದಕ್ಕೂ ಮುನ್ನ ಆಫ್ಘಾನ್ ತಂಡಕ್ಕೆ ಭಾರತ ತಂಡದ ಮಾಜಿ ಆಟಗಾರ ಲಾಲ್ಚಂದ್ ರಜಪೂತ್ ಕೋಚ್ ಆಗಿದ್ದರು. ಇದೀಗ ಅವರ ಅವಧಿ ಮುಗಿದಿದ್ದು, ಅಫ್ಘಾನ್ ಕ್ರಿಕೆಟ್ ಮಂಡಳಿ ಹೊಸ ಕೋಚ್ ಹುಡುಕಾಟದಲ್ಲಿದೆ.
ಕೈಫ್ ಭಾರತ ತಂಡದ ಪರ 13 ಟೆಸ್ಟ್, 125 ಏಕದಿನ ಪಂದ್ಯವನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 624 ರನ್ ಮತ್ತು ಏಕದಿನದಲ್ಲಿ 2753 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಗುಜರಾತ್ ಲಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.