ಸ್ಕೂಟರ್ ನೆನಪನ್ನು ಬಿಚ್ಚಿಟ್ಟ ಮೊಹಮ್ಮದ್ ಅಜರುದ್ದೀನ್
Team Udayavani, Jun 5, 2021, 10:35 PM IST
ಹೈದರಾಬಾದ್ : ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತಮ್ಮ ಸ್ಕೂಟರ್ ದಿನಗಳ ನಂಟನ್ನು ಹಂಚಿಕೊಂಡಿದ್ದಾರೆ.
“ಬಜಾಜ್ ಚೇತಕ್’ ಸ್ಕೂಟರ್ನಲ್ಲಿ ಕುಳಿತ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅದರೊಂದಿಗೆ ಕಳೆದ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
“ನನ್ನ ವೃತ್ತಿಯ ಆರಂಭದ ಸವಿ ನೆನಪುಗಳಲ್ಲಿ ಇದು ಅವಿಸ್ಮರಣೀಯವಾದದ್ದು. ನನ್ನ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿ ಹಿತೈಷಿಯೊಬ್ಬರು ನನಗೆ ಇದನ್ನು ಉಡುಗೊರೆಯಾಗಿ ನೀಡಿದ್ದರು. ಈ ಸ್ಕೂಟರ್ನಲ್ಲೇ ನಾನು ಮೈದಾನಕ್ಕೆ ತೆರಳಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದೆ’ ಎಂದು ಅಜರುದ್ದೀನ್ ಹೇಳಿದ್ದಾರೆ.
ಇದು ಹಸಿರು ಬಣ್ಣದ ಸ್ಕೂಟರ್ ಆಗಿದ್ದು, ಇದರ ಹೆಡ್ಲೈಟ್ ಮೇಲೆ “ಅಜರ್’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ