
ಇದನ್ನೇ ‘ಕರ್ಮ’ ಎಂದು ಕರೆಯುತ್ತಾರೆ…! : ಅಖ್ತರ್ ಗೆ ಶಮಿ ತಿರುಗೇಟು!
ಪಾಕ್ ಸೋಲಿನ ಬಳಿಕ ಟ್ರೆಂಡಿಂಗ್ ಆದ ''ಕರ್ಮ''
Team Udayavani, Nov 13, 2022, 6:26 PM IST

ನವದೆಹಲಿ : ಟಿ20 ವಿಶ್ವಕಪ್ 2022ರ ಫೈನಲ್‌ನಲ್ಲಿ ಪಾಕಿಸ್ಥಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲನುಭವಿಸಿದ್ದು, ಪಾಕ್ ಬೆಂಬಲಿಗರನ್ನು, ಮಾಜಿ ಕ್ರಿಕೆಟಿಗರನ್ನು ಎದೆಗುಂದುವಂತೆ ಮಾಡಿದೆ.
ಪಾಕ್ ತಂಡದ ಅಪ್ರತಿಮ ವೇಗಿಗಳಲ್ಲಿ ಒಬ್ಬರಾದ ಮಾಜಿ ಆಟಗಾರ ಶೋಯೆಬ್ ಅಖ್ತರ್, ತಂಡದ ಸೋಲಿನ ನಂತರ ಟ್ವಿಟರ್‌ನಲ್ಲಿ ‘ಒಡೆದ ಹೃದಯ’ ಎಮೋಜಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಅಖ್ತರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಇದು ‘ಕರ್ಮ’ ಎಂದು ರೀ ಟ್ವೀಟ್ ಮಾಡಿದ್ದಾರೆ.
“ಕ್ಷಮಿಸಿ ಸಹೋದರ ಇದನ್ನೇ ಕರ್ಮ ಎಂದು ಕರೆಯುತ್ತಾರೆ,”ಎಂದು ಅಖ್ತರ್ ಅವರ ‘ಒಡೆದ ಹೃದಯ’ ಎಮೋಜಿಗೆ ಪ್ರತಿಕ್ರಿಯಿಸಿ ಶಮಿ ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ , ಅಖ್ತರ್ ಅವರ ಪೋಸ್ಟ್ ಕುರಿತು ಶಮಿ ಅವರ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Sorry brother
It’s call karma ??? https://t.co/DpaIliRYkd
— Mohammad Shami (@MdShami11) November 13, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್