ವಿದೇಶದಲ್ಲಿ ಗೆದ್ದರೆ ಹೆಚ್ಚು ಅಂಕ ನೀಡಬೇಕು: ಕೊಹ್ಲಿ

Team Udayavani, Oct 10, 2019, 5:06 AM IST

ಪುಣೆ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಇದು ಭಾರೀ ಚರ್ಚೆಯಾಗುವ ನಿರೀಕ್ಷೆಯಿದೆ. ವಿದೇಶಗಳಲ್ಲಿ ಗೆದ್ದ ಟೆಸ್ಟ್‌ ಪಂದ್ಯಗಳಿಗೆ ಹೆಚ್ಚು ಅಂಕ ನೀಡಬೇಕು ಎನ್ನುವುದು ಅವರ ಬೇಡಿಕೆ.

ಪ್ರಸ್ತುತ ಒಂದು ಟೆಸ್ಟ್‌ ಸರಣಿಗೆ (ಕನಿಷ್ಠ 2, ಗರಿಷ್ಠ 5 ಪಂದ್ಯ) ಒಟ್ಟು ಫ‌ಲಿತಾಂಶದ ಆಧಾರದಲ್ಲಿ 120 ಅಂಕಗಳನ್ನು ಹಂಚಲಾಗುತ್ತದೆ. ವಿದೇಶಿ, ಸ್ವದೇಶಿ ಯಾವುದೇ ಸರಣಿಯಾದರೂ ಹೀಗೆಯೇ ಅಂಕಗಳನ್ನು ನೀಡಲಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೊಹ್ಲಿ, “ವಿದೇಶದಲ್ಲಿ ಗೆಲ್ಲುವ ಟೆಸ್ಟ್‌ ಪಂದ್ಯಗಳಿಗೆ ಎರಡರಷ್ಟು ಅಂಕ ನೀಡಬೇಕು. ಮುಂದಿನ ಆವೃತ್ತಿಗಳಲ್ಲಿ ಈ ಬದಲಾವಣೆ ನಿರೀಕ್ಷಿಸುತ್ತೇನೆ…’ ಎಂದಿದ್ದಾರೆ.
ವಿದೇಶಗಳಲ್ಲಿ ಪ್ರವಾಸಿ ತಂಡ ವೊಂದು ವ್ಯತಿರಿಕ್ತ ಸನ್ನಿವೇಶದಲ್ಲಿ ಗೆಲ್ಲುತ್ತದೆ. ಆದ್ದರಿಂದ ಅಂಕವನ್ನು ಹೆಚ್ಚಿಸಬೇಕು ಎನ್ನುವುದು ಕೊಹ್ಲಿ ಅಭಿಪ್ರಾಯವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ